ETV Bharat / state

ಅಕ್ಕಿ ಕಡಿತಗೊಳಿಸಿದ ಬಗ್ಗೆ ಹಿರಿಯ ಶಾಸಕ ಎಸ್.ಅಂಗಾರ ಸದನದಲ್ಲಿ ಪ್ರಶ್ನಿಸಬೇಕು: ಐವನ್ ಡಿಸೋಜ - ಸುಳ್ಯದಲ್ಲಿ ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಮಾಧ್ಯಮ ಗೋಷ್ಠಿ

ಬಿಜೆಪಿಯು ಜನ ಪರ ಕೆಲಸ ಮಾಡುತ್ತಿಲ್ಲ, ಬಡವರಿಗೆ ನೀಡುತ್ತಿದ್ದ ಅಕ್ಕಿಯನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಿದೆ. ಇದನ್ನು ಹಿರಿಯ ಶಾಸಕರಾಗಿರುವ ಎಸ್.ಅಂಗಾರರು ಸದನದಲ್ಲಿ ಪ್ರಶ್ನಿಸಬೇಕು ಎಂದು ಸುಳ್ಯದಲ್ಲಿ ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಹೇಳಿದ್ದಾರೆ.

KPCC spokesperson Ivan DSouza Press Meet In Sullia
ಸುಳ್ಯದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಐವನ್ ಡಿಸೋಜ
author img

By

Published : Nov 13, 2020, 11:17 AM IST

ಸುಳ್ಯ: ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿದ್ದ ಅಕ್ಕಿಯನ್ನು 7 ಕೆ.ಜಿ. ಯಿಂದ 5 ಕೆ.ಜಿ.ಗೆ ಇಳಿಸಿದ್ದು, ಇದನ್ನು ಹಿರಿಯ ಶಾಸಕರಾಗಿರುವ ಎಸ್.ಅಂಗಾರರು ಸದನದಲ್ಲಿ ಪ್ರಶ್ನಿಸಬೇಕು, ಅವರು ಬಡವರ ಪರ ಅವರು ನಿಲ್ಲಬೇಕು, ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಒಂದು ಒಳ್ಳೆಯ ಯೋಜನೆ ತಂದಿದ್ದರೆ ಅದನ್ನು ಹೇಳಲಿ. ಅವರಿಗೆ ನಾವು ಸೆಲ್ಯೂಟ್ ಹೊಡೆಯುತ್ತೇವೆ. ಆದರೆ ಅವರು ನಮ್ಮ ಸರ್ಕಾರ ಬಡವರು ಹೊಟ್ಟೆ ತುಂಬಾ ಊಟ ಮಾಡಲೆಂದು ತಂದಿದ್ದ ಅನ್ನಭಾಗ್ಯ ಯೋಜನೆಯನ್ನು ಈಗ ಕಡಿತ ಮಾಡಿದ್ದಾರೆ. ಒಂದೇ ಒಂದು ವಸತಿಯನ್ನು ರಾಜ್ಯದಲ್ಲಿ ನೀಡಿಲ್ಲ. ಇಂದಿರಾ ಕ್ಯಾಂಟೀನ್ ಯೋಜನೆಯನ್ನು ನಿಲ್ಲಿಸಲು ಯೋಚಿಸುತ್ತಿದ್ದಾರೆ. ವಿದ್ಯುತ್ ಖಾಸಗೀಕರಣ, ಕೃಷಿ ಮಸೂದೆ ತಂದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಐವನ್ ದೂರಿದರು.

2 ಸಾವಿರ ರೂಪಾಯಿಗೆ ಪ್ರತಿ ಮನೆಗೂ ಮರಳು ನೀಡುವುದಾಗಿ ಸಂಸದ ನಳಿನ್ ಕುಮಾರ್ ‌ಕಟೀಲ್ ಹೇಳಿದ್ದರು. ಅದು ಈಗ ಎಲ್ಲಿದೆ. ಯಾರಿಗೆ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದ ಐವನ್​, ಗ್ಯಾಸ್ ಸಬ್ಸಿಡಿಯನ್ನೂ ಈಗಾಗಲೇ ನಿಲ್ಲಿಸಲಾಗಿದೆ. ಪಾಪದವರಿಗೆ ಪೆನ್ಶನ್ಅನ್ನು ಕೂಡ ಈ ಸರ್ಕಾರ ನೀಡುತ್ತಿಲ್ಲ, ಬಡವರ ಪರ ಕಾಳಜಿ ಇದ್ದಿದ್ದರೆ ಇದೆಲ್ಲವನ್ನೂ ಮಾಡುತ್ತಿರಲಿಲ್ಲ, ಬಿಜೆಪಿಯು ಜನ ಪರ ಕೆಲಸ ಮಾಡುತ್ತಿಲ್ಲ ಎಂದು ಅವರು ದೂರಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.