ETV Bharat / state

ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಮೇಲೆ ತಲವಾರ್​​​ನಿಂದ ದಾಳಿ - ಬಿಜೆಪಿ ಮುಖಂಡನ ಮೇಲೆ ತಲವಾರನಿಂದ ದಾಳಿ

ಫ್ಯಾನ್ಸಿಯನ್ನು ಮುಚ್ಚಿ ತಮ್ಮ ಪರಿಚಯದ ಮಂಜುನಾಥ್ ಎಂಬವರ ಬೈಕ್ ಏರಿ ಹೊರಟಿದ್ದಾರೆ‌. ಅದೇ ಸಮಯಕ್ಕೆ ಹಿಂದಿನಿಂದ ಬಂದ ಪಲ್ಸರ್ ಬೈಕ್ ನಲ್ಲಿದ್ದ ಮೂವರು ದುಷ್ಕರ್ಮಿಗಳು ಪ್ರಕಾಶ್ ಶೆಟ್ಟಿ ಅವರನ್ನು ಗುರಿಯಾಗಿಸಿ ತಲವಾರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಬಿಜೆಪಿ ಮುಖಂಡನ ಮೇಲೆ ತಲವಾರನಿಂದ ದಾಳಿ

author img

By

Published : Oct 19, 2021, 4:37 PM IST

ಮಂಗಳೂರು: ನಗರದ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಬಳಿ ಹೊಂಚು ಹಾಕಿ ಬೈಕ್ ನಲ್ಲಿ ಹಿಂದಿನಿಂದ ಬಂದ ಮೂವರು ಅಪರಿಚಿತರು ಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕೊಣಾಜೆ ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ(41) ಎಂಬವರ ಮೇಲೆ ತಲವಾರ್​​​ನಿಂದ ದಾಳಿ ನಡೆದಿದೆ. ಅವರ ಸಮಯ ಪ್ರಜ್ಞೆಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ನಗರದ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್​​​ನ ಮಾಲೀಕರಾಗಿರುವ ಪ್ರಕಾಶ್ ಶೆಟ್ಟಿ ಅವರು ನಿನ್ನೆ ರಾತ್ರಿ 9.30ಕ್ಕೆ ತಮ್ಮ ಫ್ಯಾನ್ಸಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದರು. ಅದೇ ಸಮಯಕ್ಕೆ ಅವರು ತಮ್ಮ ಫ್ಯಾನ್ಸಿ ಮಳಿಗೆಯಿಂದ ಸ್ವಲ್ಪ ದೂರದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಕುಳಿತಿದ್ದ ಮೂವರು ಯುವಕರನ್ನು ಗಮನಿಸಿದ್ದರು.

ಅವರು ಫ್ಯಾನ್ಸಿಯನ್ನು ಮುಚ್ಚಿ ತಮ್ಮ ಪರಿಚಯದ ಮಂಜುನಾಥ್ ಎಂಬವರ ಬೈಕ್ ಏರಿ ಹೊರಟಿದ್ದಾರೆ‌. ಅದೇ ಸಮಯಕ್ಕೆ ಹಿಂದಿನಿಂದ ಬಂದ ಪಲ್ಸರ್ ಬೈಕ್​​​​ನಲ್ಲಿದ್ದ ಮೂವರು ದುಷ್ಕರ್ಮಿಗಳು ಪ್ರಕಾಶ್ ಶೆಟ್ಟಿ ಅವರನ್ನು ಗುರಿಯಾಗಿಸಿ ತಲವಾರ್​ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ತಕ್ಷಣ ಅಪಾಯದ ಮುನ್ಸೂಚನೆಯನ್ನು ಅರಿತ ಪ್ರಕಾಶ್ ಶೆಟ್ಟಿ ತಲವಾರು ಏಟನ್ನು ತಪ್ಪಿಸಿದ್ದಾರೆ‌. ಆಗ ಅವರಿದ್ದ ಬೈಕ್ ಉರುಳಿ ಬಿದ್ದಿದೆ. ತಕ್ಷಣ ಬಿದ್ದಲ್ಲಿಂದ ಬೈಕ್ ಚಾಲಕ ಮಂಜುನಾಥ್ ಹಾಗೂ ಪ್ರಕಾಶ್ ಹತ್ತಿರದ ಜನ ವಸತಿ ಇರುವ ಪ್ರದೇಶಕ್ಕೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.

ತಲವಾರ್​ ದಾಳಿಯಿಂದ ಪ್ರಕಾಶ್ ಶೆಟ್ಟಿಯವರ ಬಲ ಕೈಗೆ ಏಟಾಗಿದೆ. ಈ ಬಗ್ಗೆ ಪ್ರಕಾಶ್ ಶೆಟ್ಟಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.