ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆವರಣದ ಕೋವಿಡ್ ಫೀವರ್ ಕ್ಲಿನಿಕ್ ಪಿಎಂಎಸ್‍ಎಸ್‍ವೈ ಕಟ್ಟಡದ ಎದುರಿನ ನರ್ಸಿಂಗ್ ಕಾಲೇಜಿಗೆ ಸ್ಥಳಾಂತರವಾಗಿದೆ. ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹ ಕಾರ್ಯವೂ ಕೂಡಾ ಪುನರಾರಂಭವಾಗಿದೆ ಎಂದು ಕಿಮ್ಸ್ ಫೀವರ್ ಕ್ಲಿನಿಕ್ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಗಂಟಲು ಮತ್ತು ಮೂಗು ದ್ರವ ಮಾದರಿ ಸಂಗ್ರಹಣೆಯನ್ನು ಸ್ಥಗಿತಗೊಳಿಸಿ ಸ್ಯಾನಿಟೈಸ್ ಮಾಡಲಾಗಿತ್ತು. ನಿತ್ಯ ನೂರಾರು ಜನ ಪರೀಕ್ಷೆಗೆ ಆಗಮಿಸುತ್ತಿದ್ದರು. ಅದರ ಜೊತೆಗೆ ಕೋವಿಡ್ ಫಿವರ್ ಕ್ಲಿನಿಕ್ ಕೂಡ ಕಾರ್ಯನಿರ್ವಹಿಸುತ್ತಿದ್ದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿತ್ತು. ಹೀಗಾಗಿ ಕೊವಿಡ್ ಫೀವರ್ ಕ್ಲಿನಿಕ್ ಸ್ಥಳಾಂತರ ಮಾಡಲಾಗಿದೆ ಎಂದು ನೋಡಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ ತಿಳಿಸಿದ್ದಾರೆ.