ಸುಳ್ಯ : ಕಡಬ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇನ್ಯ ಇಲ್ಲಿನ ಶಾಲಾ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿರುವ ಬಗ್ಗೆ ಈಗಾಗಲೇ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಸ್ಥಳೀಯ ಪಂಚಾಯತ್ 6ನೇ ಸಲ ದೂರು ನೀಡಿದೆ. ಆದರೆ, ಈತನಕ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಕೇನ್ಯ ಶಾಲಾಭಿವೃದ್ಧಿ ಸಮಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಇಮೇಲ್ ಮಾಡಿದೆ.

ಈಗಾಗಲೇ ಈ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯವು ಶೇ.80ರಷ್ಟು ಪೂರ್ಣವಾಗಿದೆ. ಇಲ್ಲಿ ಒತ್ತುವರಿ ಮಾಡಿದವರು ಕಾನೂನು ಮತ್ತು ಅಧಿಕಾರಿ ವರ್ಗಕ್ಕೂ ಬೆಲೆ ನೀಡದೆ ನಿರಂತರವಾಗಿ ಅಕ್ರಮ ನಡೆಸುತ್ತ ಬಂದಿರುವುದು ಬೇಸರದ ವಿಷಯವಾಗಿರುತ್ತದೆ. ಕಡಬ ತಾಲೂಕು ತಹಶೀಲ್ದಾರ್ ಅವರಿಗೆ ಈ ವಿಷಯದ ಬಗ್ಗೆ ಅನೇಕ ಬಾರಿ ಲಿಖಿತ ದೂರನ್ನು ಸಲ್ಲಿಸಿದ್ದರೂ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ.
ಹಾಗಾಗಿ, ಎಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಪ್ರತ್ಯಕ್ಷವಾಗಿ ಕಂಡು ಬರುತ್ತಿದೆ. ತಾವು ಮತ್ತೊಮ್ಮೆ ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಕೇನ್ಯ ಶಾಲಾಭಿವೃದ್ಧಿ ಸಮಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಇಮೇಲ್ ಮಾಡಿದೆ.

ಕಡಬ ತಾಲೂಕಿನ ಕೇನ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಆವರಣ ಗೋಡೆಯೊಳಗಿರುವ ಜಮೀನನ್ನು ಸ್ಥಳೀಯರೊಬ್ಬರು ಅಕ್ರಮವಾಗಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಾನ್ಯ ಪ್ರಧಾನಮಂತ್ರಿಗಳಿಗೂ ದೂರು ನೀಡಲಾಗಿತ್ತು.
ಕೂಡಲೇ ಇದರ ಬಗ್ಗೆ ತನಿಖೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಜನವರಿ 20, 2022ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ಇಲ್ಲಿ ಅಕ್ರಮ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ.

ಇದೀಗ ಮನೆ ನಿರ್ಮಿಸಲು ಭೂ ಪರಿವರ್ತನೆ ಮಾಡಿಸಿಕೊಂಡು ಬಲ್ಪ ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆಯಲಾಗಿದೆ ಎನ್ನಲಾಗಿದೆ. ಆದರೆ, ಅನುಮತಿ ಪಡೆದ ಜಾಗ ಮತ್ತು ಮನೆ ನಿರ್ಮಿಸುತ್ತಿರುವ ಜಾಗ ಬೇರೆ ಬೇರೆ ಆಗಿರುತ್ತದೆ ಎಂಬುದು ತಿಳಿದು ಬಂದಿದೆ. ಈಗಾಗಲೇ ಇದರ ಬಗ್ಗೆ ಪಂಚಾಯತ್‌ಗೆ 6ನೇ ಸಲ ದೂರು ನೀಡಲಾಗಿದ್ದು, ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಮನೆ ನಿರ್ಮಾಣ ಕಾರ್ಯ ಶೇ.80ರಷ್ಟು ಈಗಾಗಲೇ ಮುಗಿದಿದೆ. ಇಲ್ಲಿ ಕಾನೂನು ಮತ್ತು ಅಧಿಕಾರಿ ವರ್ಗಕ್ಕೂ ಬೆಲೆ ನೀಡದೆ ನಿರಂತರವಾಗಿ ಅಕ್ರಮ ನಡೆಸುತ್ತ ಬಂದಿರುವುದು ಬೇಸರದ ವಿಷಯವಾಗಿದೆ. ಕಡಬ ತಾಲೂಕು ತಹಶೀಲ್ದಾರ್ ಅವರಿಗೆ ಈ ವಿಷಯದ ಬಗ್ಗೆ ಅನೇಕ ಬಾರಿ ಲಿಖಿತ ದೂರನ್ನು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

ಕಳೆದ 7 ವರ್ಷಗಳಿಂದ ಈ ಮೇಲ್ಕಂಡ ವಿಷಯದ ಬಗ್ಗೆ ನಿರಂತರವಾಗಿ ದೂರನ್ನು ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಇರುವುದರಿಂದ ಕಡಬ ತಹಶೀಲ್ದಾರ್ ಸೇರಿದಂತೆ ಎಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಪ್ರತ್ಯಕ್ಷವಾಗಿ ಕಂಡು ಬರುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದ್ದರಿಂದ, ತಾವುಗಳು ಮತ್ತೊಮ್ಮೆ ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕಾಗಿ ಮತ್ತು ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ಕಂಡು ಬರುತ್ತಿರುವುದರಿಂದ ಈಗ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕಾಗಿ ವಿನಂತಿಸುತ್ತಿದ್ದೇವೆ ಎಂದು ಕೇನ್ಯ ಶಾಲಾಭಿವೃದ್ಧಿ ಸಮಿತಿಯು ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರನ್ನು ಇಮೇಲ್ ಮಾಡಿದೆ.
ಓದಿ: ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?: ದಿನೇಶ್ ಗುಂಡೂರಾವ್ ಪ್ರಶ್ನೆ