ETV Bharat / state

ರಾಜ್ಯದಲ್ಲಿ 'ಕ್ಯಾರ್​​' ಚಂಡಮಾರುತದ ಅಬ್ಬರ... ಕರಾವಳಿಯಲ್ಲಿ ತಗೋಬೇಕಿದೆ ಕೇರ್​​​​! - Kyarr cyclone in karnataka

ರಾಜ್ಯದಲ್ಲಿ ಕ್ಯಾರ್​​ ಚಂಡಮಾರುತ ಲಗ್ಗೆ ಇಟ್ಟಿದ್ದು, ಇನ್ನೂ 5 ದಿನಗಳವರೆಗೆ ರಾಜ್ಯದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಂಧರ್ಬಿಕ ಚಿತ್ರ
author img

By

Published : Oct 26, 2019, 8:41 AM IST

Updated : Oct 26, 2019, 10:07 AM IST

ಮಂಗಳೂರು/ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕ್ಯಾರ್​​ ಚಂಡಮಾರುತ ಉದ್ಭವಿಸಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ ಮುಂದುವರೆದಿದೆ.

ಹವಾಮಾನ ಇಲಾಖೆ ಪ್ರಕಾರ ಕ್ಯಾರ್​​ ಚಂಡಮಾರುತ ನಿನ್ನೆ ರಾತ್ರಿ 11.30ಕ್ಕೆ ಕೇಂದ್ರಿಕೃತವಾಗಿದ್ದು, ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ರತ್ನಗಿರಿಯಿಂದ ಪಶ್ಚಿಮಕ್ಕೆ ಸುಮಾರು 200 ಕಿ.ಮೀ. ಹಾಗೂ ಮುಂಬೈನ ನೈರುತ್ಯ ದಿಕ್ಕಿನಲ್ಲಿ 310 ಕಿ.ಮೀ.ವರೆಗೆ ಮುಂದುವರಿಯಲಿದೆ. 5 ದಿನಗಳ ನಂತರ ಒಮನ್​ ಕರಾವಳಿ ಭಾಗ ಪ್ರವೇಶಸಿಲಿದೆ ಎಂದು ತಿಳಿಸಿದೆ.

ಕರಾವಳಿ ಭಾಗದಲ್ಲಿ ಆರ್ಭಟಿಸುತ್ತಿರುವ ವರುಣ

ಕರಾವಳಿಯಲ್ಲಿ ಕಟ್ಟೆಚ್ಚರ: ಕ್ಯಾರ್​ ಚಂಡಮಾರುತದಿಂದಾಗಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಅಬ್ಬರಿಸುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇಂದು ಆರೆಂಜ್​ ಅಲರ್ಟ್​ ಹಾಗೂ ನಾಳೆ ಭಾನುವಾರ ಎಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕ್ಯಾರ್​​ ಚಂಡಮಾರುತದಿಂದ ಉಂಟಾದ ಹವಾಮಾನ ವೈಪರೀತ್ಯ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿದ್ದ ಸುಮಾರು 100 ಬೋಟುಗಳು ಹಾಗೂ ಅವುಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ. ಮಂಗಳೂರಿನ ನೂತನ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳನ್ನು ಲಂಗರು ಹಾಕಲಾಗಿದ್ದು, ಸಾವಿರಕ್ಕೂ ಅಧಿಕ ಮೀನುಗಾರರಿಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಲಾಗಿದೆ.

  • New Mangaluru Port Trust(NMPT): In the wake of present weather conditions around the west coast of India,New Mangaluru Port rescued around 100 fishing boats and more than thousand people, and provided shelter within the safe zone of the harbour. (Pic: NMPT) #CycloneKyarr pic.twitter.com/Wo1lek144c

    — ANI (@ANI) October 26, 2019 " class="align-text-top noRightClick twitterSection" data=" ">

ಝರಿ ನಾಡಾದ ಮಲೆನಾಡು: ಮಲೆನಾಡಿನಾದ್ಯಂತ ಮಳೆರಾಯ ತನ್ನ ಆಟ ಮುಂದುವರೆಸಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಎಲ್ಲೆಲ್ಲೂ ಝರಿಯಂತೆ ಗೋಚರಿಸತೊಡಗಿದೆ. ಅದಲ್ಲದೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಸದ್ಯ ಶರಾವತಿ ಹಿನ್ನೀರಿನ ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, 30 ಸಾವಿರ ಕ್ಯೂಸೆಕ್​ ನೀರು ಹೊರ ಬಿಡಲಾಗಿದೆ. ಇದರಿಂದಾಗಿ ಜೋಗ ಜಲಪಾತ ಉಕ್ಕಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

Intro:Body:Conclusion:
Last Updated : Oct 26, 2019, 10:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.