ETV Bharat / state

ಕರ್ನಾಟಕ ಭಯೋತ್ಪಾದಕರ ಕೇಂದ್ರವಾಗುತ್ತಿರುವುದು ಆತಂಕಕಾರಿ: ಡಾ.ಕಲ್ಲಡ್ಕ ಭಟ್ - rss prabhakar bhat talk on terrorism

ಭಯೋತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗುವುದನ್ನು ತಡೆಗಟ್ಟದಿದ್ದರೆ ಸರ್ವನಾಶವಾಗುತ್ತದೆ ಇದರ ಮೂಲವನ್ನು ಶೋಧಿಸಬೇಕು ಎಂದು ಡಾ.ಕಲ್ಲಡ್ಕ ಪ್ರಭಾಕರ್​ ಭಟ್​ ಒತ್ತಾಯಿಸಿದರು.

Kn_mng
ಡಾ.ಕಲ್ಲಡ್ಕ ಪ್ರಭಾಕರ್​ ಭಟ್
author img

By

Published : Nov 21, 2022, 9:22 PM IST

ಬಂಟ್ವಾಳ: ಇಡೀ ದೇಶದಲ್ಲಿ ಕರ್ನಾಟಕ ಭಯೋತ್ಪಾದಕರ ಕೇಂದ್ರವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ನಾನು ಯಾವುದೇ ಒಂದು ಜಾತಿ ಮತ ಎಂದು ಹೇಳುತ್ತಿಲ್ಲ, ಒಟ್ಟು ಭಯೋತ್ಪಾದನೆ ಎಂದು ಏನಿದೆಯೋ ಇದು ಸಮಾಜವನ್ನು ನಾಶ ಮಾಡುವ ಪ್ರಕ್ರಿಯೆ. ಇದು ಜಗತ್ತಿಗೇ ಮಾರಕವಾದ ಸಂಗತಿ ಎಂದು ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್​ ಭಟ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಕಡೆಯಲ್ಲಿದ್ದ ಹಾಗೆ ಮಂಗಳೂರಿನಲ್ಲೂ ಭಯೋತ್ಪಾದನೆಯ ಕೇಂದ್ರವಿದೆ. ಶರತ್ ಮಡಿವಾಳ, ಪ್ರವೀಣ್​ ನೆಟ್ಟಾರು, ಹರ್ಷ ಹತ್ಯೆ ಹಿಂದೆ ಭಾರಿ ದೊಡ್ಡ ಭಯೋತ್ಪಾದಕರ ಗುಂಪು ಕೆಲಸ ಮಾಡುತ್ತಿದೆ. ಇದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಟ್ರೈನಿಂಗ್ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೊಂದು ಕೇಂದ್ರವಾಗುತ್ತಿದೆ.

ಭಯೋತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗುವುದನ್ನು ತಡೆಗಟ್ಟದಿದ್ದರೆ ಸರ್ವನಾಶವಾಗುತ್ತದೆ. ಇದರ ಮೂಲವನ್ನು ಶೋಧಿಸಬೇಕು ಎಂದು ಹೇಳಿದ ಡಾ. ಭಟ್, ಈಗ ಅವರು ಸುಮ್ಮನೆ ಕುಳಿತಿದ್ದಾರೆ ಎಂದರೆ ಚಿಂತನೆ ಬದಲಾಗಿದೆ ಎಂದಲ್ಲ, ಸರಕಾರ ಹೆಚ್ಚು ಮುತುವರ್ಜಿಯಲ್ಲಿ ಕೆಲಸ ಮಾಡಬೇಕು. ಭಯೋತ್ಪಾದಕರ ಮೂಲ ಶೋಧಿಸಬೇಕು, ಇದರ ಹಿಂದೆ ಭಾರಿ ದೊಡ್ಡ ಜಾಲವಿದೆ. ಹಿಜಾಬ್ ಪ್ರಕರಣವಾದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಗಮನ ಸೆಳೆಯಲಾಯಿತು.

ಅಶಾಂತಿಯ ಕೃತ್ಯ ಮುಂದುವರಿಸುವವರನ್ನು ತಡೆಗಟ್ಟಬೇಕು. ಸರಕಾರ ತನ್ನ ಪ್ರಯತ್ನಗಳನ್ನು ನಿಲ್ಲಿಸದೇ, ಮಟ್ಟ ಹಾಕುವ ಕೆಲಸ ಮಾಡಬೇಕು ಎಂದರು. ಕೆಲ ವರ್ಷಗಳ ಹಿಂದೆ ಎಲ್ಲೋ ಬಾಂಬ್ ತಯಾರಿ ಆದಾಗ ಅದು ಮಂಗಳೂರಿನಲ್ಲಿ ಆಯಿತು ಎಂದು ಹೇಳುತ್ತಿದ್ದರು. ಫ್ಲ್ಯಾಟ್ ಒಂದರಲ್ಲಿ ಬಾಂಬ್ ತಯಾರಿ ನಡೆಯಿತು ಎಂಬ ಮಾತುಗಳು ಕೇಳಿಬಂದಿದ್ದವು.

ಒಬ್ಬಳು ಲವ್ ಜಿಹಾದ್​ಗೆ ಬಲಿಯಾದವಳನ್ನು ಭಯೋತ್ಪಾದನಾ ಕೃತ್ಯಕ್ಕೆ ಉಪಯೋಗಿಸಿದರು. ಪೊಲೀಸರ ಮೇಲೆ ದಾಳಿ ಮಾಡಲು ಹೊರಟಿದ್ದರು. ಭಯೋತ್ಪಾದನೆ ಇಲ್ಲಿ ನಮ್ಮ ಮಧ್ಯದಲ್ಲೇ ಇದೆ. ಇಂಥದ್ದು ಅನೇಕವಾಗಿರಬಹುದು. ಭಯೋತ್ಪಾದಕರಿಗೆ ಆರ್ಥಿಕ ಸಹಕಾರ ನೀಡುವವರೂ ಇದ್ದಾರೆ ಎಂದು ಭಟ್​ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ನನಗೆ ಚಪ್ಪಲಿಯಲ್ಲಿ ಹೊಡೆದರು: ಶಾಸಕ ಎಂ ಪಿ ಕುಮಾರಸ್ವಾಮಿ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.