ಮಂಗಳೂರು: ಉಳ್ಳಾಲ ಪೇಟೆ ಪಾಕಿಸ್ತಾನವೇ ಆಗಿದೆ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ.
ಮಂಗಳೂರಿನ ಕಿನ್ಯಾದಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ.
ಒಟ್ಟು ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆಯಾಗಿದೆ. ನಮ್ಮ ದೇವಸ್ಥಾನ, ದೇವಸ್ಥಾನ ಉಳಿಸುವವರು ಯಾರು? ಅವರ ಸಂಖ್ಯೆ ಹೆಚ್ಚಾಗಿ ನಮ್ಮ ಸಂಖ್ಯೆ ಕಡಿಮೆಯಾದ ಕಾರಣ ಪಾಕಿಸ್ತಾನ ಆಯಿತು. ಉಳ್ಳಾಲ ಪೇಟೆಗೆ ಹೋದರೆ ಅದು ಈಗ ಪಾಕಿಸ್ತಾನವಾಗಿದೆ. ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ. ಮಂಗಳೂರಿನ ಉಳ್ಳಾಲ ಮಾಜಿ ಸಚಿವ ಯು ಟಿ ಖಾದರ್ ಶಾಸಕರಾಗಿರುವ ಪ್ರದೇಶವಾಗಿದೆ.