ಕಡಬ: ಮನೆಯಿಂದ ತೆರಳಿದ್ದ ವ್ಯಕ್ತಿಯೋರ್ವ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬದ ಕೋಡಿಂಬಾಳ ಗ್ರಾಮದ ಅಜ್ಜಿಕಟ್ಟೆ ನಿವಾಸಿ ವಾಸುಗೌಡ ಎಂಬವರ ಪುತ್ರ ಸತೀಶ್ (33) ಎಂಬಾತ ಜೂನ್ 26 ರಿಂದ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಆತನ ಮನೆಯವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಳು ಮತ್ತು ಕನ್ನಡ ಭಾಷೆ ಮಾತನಾಡುವ ಈತ ಯಾರಿಗಾದರೂ ಕಂಡು ಬಂದಲ್ಲಿ ಕಡಬ ಠಾಣೆ ಮೊ: 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.