ETV Bharat / state

ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಮಂಗಳೂರಿನಲ್ಲಿ‌ ಪ್ರತಿಭಟನೆ

ಕಾಶ್ಮೀರದಲ್ಲಿ ನಿನ್ನೆ ನಡೆದ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದ್ದು, ಮೃತಪಟ್ಟ ಸೈನಿಕರ ಮೃತದೇಹಗಳ ಗುರುತು ಸಿಗದಂತೆ ಛಿದ್ರವಾಗಿದೆ. ಇದಕ್ಕೆ ಕಾರಣ ಪಾಪಿ ಪಾಕಿಸ್ತಾನ. ಈ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಅಳಿಸಬೇಕು ಎಂದು ಮಂಗಳೂರಲ್ಲಿ ಜಗದೀಶ ಶೇಣವ ಆಕ್ರೋಶ ವ್ಯಕ್ತಪಡಿಸಿದರು.

attack 1
author img

By

Published : Feb 15, 2019, 5:02 PM IST

ಮಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಹತ್ಯೆಯನ್ನು‌ ಖಂಡಿಸಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಇಂದು ನಗರದ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್, ದ.ಕ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಕಾಶ್ಮೀರದಲ್ಲಿ ನಿನ್ನೆ ನಡೆದ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದ್ದು, ಮೃತಪಟ್ಟ ಸೈನಿಕರ ಮೃತದೇಹಗಳ ಗುರುತು ಸಿಗದಂತೆ ಛಿದ್ರವಾಗಿವೆ. ಇದಕ್ಕೆ ಕಾರಣ ಪಾಪಿ ಪಾಕಿಸ್ತಾನ. ಈ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಅಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಉರಿ ದಾಳಿಗೆ ಪ್ರತೀಕಾರವಾಗಿ ನಮ್ಮ ದೇಶ ಸರ್ಜಿಕಲ್ ಸ್ಟ್ರೈಕ್ ಮಾಡಿತು. ಆದರೆ ಇವತ್ತು ಕೆಲವು ವಾಟ್ಸಪ್​ ಮೆಸೇಜ್​ಗಳಲ್ಲಿ ನಮ್ಮವರೇ ನಿನ್ನೆ ನಡೆದದ್ದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ವಿಕೃತಿ ಮೆರೆದಿದ್ದಾರೆ. ಅಂದರೆ ನಮ್ಮ ದೇಶದಲ್ಲೇ ಇರುವ ದೇಶದ್ರೋಹಿಗಳು ಪಾಕಿಸ್ತಾನವನ್ನು‌ಬೆಂಬಲಿಸುವ ಸೂಚನೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವು ಪೊಲೀಸರಿಗೆ ಆಗ್ರಹಿಸುವುದೇನೆಂದರೆ, ಇದು ದೇಶದ ಭದ್ರತೆಗೆ ಕಂಟಕ. ಆದ್ದರಿಂದ ಪೊಲೀಸರು ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ದೇಶದ ಒಳಗಡೆ ಉಗ್ರಗಾಮಿಗಳಿದ್ದಾರೆ. ನಿನ್ನೆ ಆತ್ಮಾಹುತಿ ಬಾಂಬ್ ಸಿಡಿಸಿ 45 ಮಂದಿ ಸೈನಿಕರ ‌ಸಾವಿಗೆ ಕಾರಣನಾದವನು ನಮ್ಮ ದೇಶದವನೇ. ಆದ್ದರಿಂದ ಪಾಕಿಸ್ತಾನವನ್ನು ಇನ್ನು ಸುಮ್ಮನೆ ಬಿಡುವ ಪರಿಸ್ಥಿತಿಯೇ ಇಲ್ಲ. ಸಾಮಾನ್ಯವಾಗಿ ಯುದ್ಧವಾದಾಗ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತವಾಗುತ್ತದೆ ಎನ್ನಲಾಗುತ್ತದೆ. ಆದರೆ ಹಿಂದೆ ಯುದ್ಧದ ಸಂದರ್ಭ ಲಾಲ್ ಬಹದ್ದೂರ್ ಶಾಸ್ತ್ರೀಯವರು ಕರೆ ಕೊಟ್ಟಾಗ ಎಲ್ಲರೂ ಒಪ್ಪತ್ತು ಊಟ ಬಿಟ್ಟಿದ್ದರು. ಅನೇಕ ಹೆಂಗಸರು ಮಂಗಳಸೂತ್ರವನ್ನೇ ಕೊಟ್ಟಿದ್ದರು. ಆದ್ದರಿಂದ ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಈ ದೇಶದ ಪ್ರಧಾನಿಯವರು ಏನು ಅಪೇಕ್ಷೆ ಪಡುತ್ತಾರೋ ಅದನ್ನು ನೆರವೇರಿಸುತ್ತೇವೆ ಎಂದರು.

undefined
ಪ್ರತಿಭಟನೆ

undefined

ಈ ಸಂದರ್ಭ ಶರಣ್ ಪಂಪ್​ವೆಲ್ ಮಾತನಾಡಿ, ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಯಾವ ರೀತಿ ಪಾಠ ಕಲಿಸುತ್ತಾರೋ, ಅದೇ ರೀತಿ ಭಯೋತ್ಪಾದಕರಿಗೆ ಬೆಂಬಲ ಕೊಡುವ ದೇಶದ ಒಳಗಿರುವ ದೇಶದ್ರೋಹಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇನ್ನು ಅಫ್ಝಲ್ ಗುರುವಿನಂತಹ ಭಯೋತ್ಪಾದಕ ಸತ್ತರೆ ಈ ದೇಶದಲ್ಲಿ ಶ್ರದ್ಧಾಂಜಲಿ, ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತದೆ. ರೋಹಿಂಗ್ಯರಿಗೆ ಈ ದೇಶದಲ್ಲಿ ಜಾಗ ಕೊಡಬೇಕೆಂದು ಈ ದೇಶದ ರಾಜಕೀಯ ಪಕ್ಷಗಳು ಹೇಳುತ್ತವೆ. ಇದೆಲ್ಲವೂ ಭಯೋತ್ಪಾದಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ಕೊಡುವ ಷಡ್ಯಂತ್ರ. ಆದ್ದರಿಂದ ಈ ಪ್ರತಿಭಟನೆಯ ಮೂಲಕ ಪ್ರಧಾನಿಯವರಿಗೆ ತಿಳಿಸುವುದೇನೆಂದರೆ, ತಾವು ಪ್ರತಿಭಟನೆಯ ಮೂಲಕ ಯುದ್ಧವನ್ನು ಸಾರಬೇಕು. ಅಲ್ಲದೆ ನಮ್ಮ ದೇಶದಲ್ಲಿರುವ ಭಯೋತ್ಪಾದನೆಯನ್ನು ಕೂಡಾ ನಿರ್ನಾಮ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲು ಶಕ್ತಿ ತುಂಬಲು ಹನುಮಾನ್ ಚಾಲೀಸ ಪಠಣ ನಡೆಸಲಾಯಿತು. ಅಲ್ಲದೆ ಜಗದೀಶ ಶೇಣವ ಯುದ್ಧ ನಿಧಿಗೆ 10,000 ರೂ. ಚೆಕ್ ನೀಡಿದರು. ಬಳಿಕ ಎರಡು ನಿಮಿಷಗಳ ಕಾಲ ಪ್ರತಿಭಟನಾಕಾರರು ರಸ್ತೆಯ ಮಧ್ಯೆ ಕುಳಿತು ರಸ್ತೆ ತಡೆ ನಡೆಸಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

Intro:ಮಂಗಳೂರು: ಜಮ್ಮುವಿನಿಂದ ಕಾಶ್ಮೀರದಲ್ಲಿ ನಿನ್ನೆ ನಡೆದ ಘಟನೆ ಅತ್ಯಂತ ಹೃದಯ ವಿದ್ರಾವಕ ದೃಶ್ಯವಾಗಿದ್ದು, ಮೃತಪಟ್ಟ ಸೈನಿಕರ ಮೃತದೇಹ ಗುರುತು ಸಿಗದಂತೆ ಛಿದ್ರವಾಗಿದೆ. ಇದಕ್ಕೆ ಕಾರಣ ಪಾಪಿ ಪಾಕಿಸ್ತಾನ. ಈ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಅಳಿಸಬೇಕು ಎಂದು ಜಗದೀಶ ಶೇಣವ ಹೇಳಿದರು.

ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಹತ್ಯೆಯನ್ನು‌ ಖಂಡಿಸಿ, ವಿಶ್ವ ಹಿಂದು ಪರಿಷತ್ ಬಜರಂಗದಳ ಇಂದು ನಗರದ ಪಿವಿಎಸ್ ವೃತ್ತದ ಬಳಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇತ್ತೀಚೆಗೆ ನಡೆದ ಉರಿ ದಾಳಿಗೆ ಪ್ರತೀಕಾರವಾಗಿ ನಮ್ಮ ದೇಶ ಸರ್ಜಿಕಲ್ ಸ್ಟ್ರೈಕ್ ಮಾಡಿತು. ಆದರೆ ಇವತ್ತು ಕೆಲವು ವ್ಯಾಟ್ಸ್ಆ್ಯಪ್ ಮೆಸೇಜ್ ಗಳಲ್ಲಿ ನಮ್ಮವರೇ, ನಿನ್ನೆ ನಡೆದದ್ದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ವಿಕೃತಿ ಮೆರೆದಿದ್ದಾರೆ. ಅಂದರೆ ನಮ್ಮ ದೇಶದಲ್ಲೇ ಇರುವ ದೇಶದ್ರೋಹಿಗಳು ಪಾಕಿಸ್ತಾನ ವನ್ನು‌ಬೆಂಬಲಿಸುವ ಸೂಚನೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವು ಪೊಲೀಸರಿಗೆ ಆಗ್ರಹಿಸುವುದೆಂದರೆ ಇದು ದೇಶದ ಭದ್ರತೆಗೆ ಕಂಟಕ. ಆದ್ದರಿಂದ ಪೊಲೀಸರು ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿ, ಪಾಕಿಸ್ತಾನ ಕ್ಕೆ ಕಳುಹಿಸುವ ಕೆಲಸ ಮಾಡಬೇಕು ಎಂದು ಜಗದೀಶ ಶೇಣವ ಹೇಳಿದರು.

Body:ನಮ್ಮ ದೇಶದ ಒಳಗಡೆ ಉಗ್ರಗಾಮಿಗಳಿದ್ದಾರೆ. ನಿನ್ನೆ ಆತ್ಮಾಹುತಿ ಬಾಂಬ್ ಸಿಡಿಸಿ 45 ಮಂದಿ ಸೈನಿಕರ ‌ಸಾವಿಗೆ ಕಾರಣನಾದವನು ನಮ್ಮ ದೇಶದವನೇ. ಆದ್ದರಿಂದ ಪಾಕಿಸ್ತಾನವನ್ನು ಇನ್ನು ಸುಮ್ಮನೆ ಬಿಡುವ ಪರಿಸ್ಥಿತಿಯೇ ಇಲ್ಲ. ಸಾಮಾನ್ಯವಾಗಿ ಯುದ್ಧವಾದಾಗ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತವಾಗುತ್ತದೆ ಎನ್ನಲಾಗುತ್ತದೆ. ಆದರೆ ಹಿಂದೆ ಯುದ್ಧದ ಸಂದರ್ಭ ಲಾಲ್ ಬಹದ್ದೂರ್ ಶಾಸ್ತ್ರೀಯ ವರು ಕರೆ ಕೊಟ್ಟಾಗ ಎಲ್ಲರೂ ಒಪ್ಪತ್ತು ಊಟ ಬಿಟ್ಟಿದ್ದರು. ಅನೇಕ ಹೆಂಗಸರು ಮಂಗಳಸೂತ್ರವನ್ನೇ ಕೊಟ್ಟಿದ್ದರು. ಆದ್ದರಿಂದ ಸಂಘಪರಿವಾರದ ಎಲ್ಲಾ ಕಾರ್ಯಕರ್ತರು ಈ ದೇಶದ ಪ್ರಧಾನಿಯವರು ಏನು ಅಪೇಕ್ಷೆ ಪಡುತ್ತಾರೆ ಅದನ್ನು ನೆರವೇರಿಸುತ್ತೇವೆ ಎಂದು ಜಗದೀಶ ಶೇಣವ ಹೇಳಿದರು.

ಈ ಸಂದರ್ಭ ಶರಣ್ ಪಂಪ್ ವೆಲ್ ಮಾತನಾಡಿ, ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಯಾವ ರೀತಿ ಪಾಠ ಕಲಿಸುತ್ತಾರೋ, ಅದೇ ರೀತಿ ದೇಶದ ಒಳಗಿರುವ ಭಯೋತ್ಪಾದಕ ರಿಗೆ ಬೆಂಬಲ ಕೊಡುವ ದೇಶದ್ರೋಹಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Conclusion:ಅಫ್ಝಲ್ ಗುರುವಿನಂತಹ ಭಯೋತ್ಪಾದಕ ಸತ್ತರೆ ಈ ದೇಶದಲ್ಲಿ ಶ್ರದ್ಧಾಂಜಲಿ, ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತದೆ. ರೋಹಿಂಗ್ಯರಿಗೆ ಈ ದೇಶದಲ್ಲಿ ಜಾಗ ಕೊಡಬೇಕೆಂದು ಈ ದೇಶದ ರಾಜಕೀಯ ಪಕ್ಷಗಳು ಹೇಳುತ್ತವೆ. ಇದೆಲ್ಲ ವೂ ಭಯೋತ್ಪಾದಕ ರಿಗೆ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಬೆಂಬಲಕೊಡುವ ಷಡ್ಯಂತ್ರ. ಆದ್ದರಿಂದ ಈ ಪ್ರತಿಭಟನೆಯ ಮೂಲಕ ಪ್ರಧಾನಿಯವರಿಗೆ ತಿಳಿಸುವುದೇನೆಂದರೆ ತಾವು ಪ್ರತಿಭಟನೆಯ ಮೂಲಕ ಯುದ್ಧವನ್ನು ಸಾರಬೇಕು.ಅಲ್ಲದೆ ನಮ್ಮ ದೇಶದಲ್ಲಿರುವ ಭಯೋತ್ಪಾದನೆ ಯನ್ನು ಕೂಡಾ ನಿರ್ಣಾಮ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲು ಶಕ್ತಿ ತುಂಬಲು ಹನುಮಾನ್ ಚಾಲೀಸ್ ಪಠಣ ನಡೆಸಲಾಯಿತು. ಅಲ್ಲದೆ ಜಗದೀಶ ಶೇಣವ ಯುದ್ಧ ನಿಧಿಗೆ 10,000 ರೂ. ಚೆಕ್ ನೀಡಿದರು.

ಬಳಿಕ ಎರಡು ನಿಮಿಷಗಳ ಕಾಲ ಪ್ರತಿಭಟನಾಕಾರರು ರಸ್ತೆಯ ಮಧ್ಯೆ ಕುಳಿತು ರಸ್ತೆ ತಡೆ ನಡೆಸಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

Reporter_Vishwanath Panjimogaru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.