ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹೊಳೆ ಬದಿಯಲ್ಲಿ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು 15 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಮಿತ ಶೆಟ್ಟಿ, ರಾಮಚಂದ್ರ, ಸಂತೋಷ್ ಕುಮಾರ್, ಧೀರಜ್, ಸುಜಯ್, ನಜೀರ್, ಮೊಹಮದ್ ಮುಸ್ತಾಫಾ, ಕಿಶೋರ್, ಮಹಮದ್ ಷರೀಫ್, ನಿತ್ಯಾನಂದ, ರಮೇಶ್, ನಾಗೇಶ್, ರೋಷನ್ ವೇಗಸ್, ಹೇಮಚಂದ್ರ, ಚೇತನ್ ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜುಗಾರಿಯಲ್ಲಿ ಬಳಸಲಾದ ಒಟ್ಟು 38000/-ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಟಾರ್ಪಲ್, ಬ್ಯಾಟರಿ ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.