ಬಂಟ್ವಾಳ: ಇಂದು ಕೋರ್ಟ್ ನೀಡಿದ ತೀರ್ಪು ಅಪಪ್ರಚಾರದ ವಿರುದ್ಧ ಹಾಗೂ ಧರ್ಮದ ಪರವಾಗಿದೆ. ನ್ಯಾಯ, ಸತ್ಯ, ಧರ್ಮಕ್ಕೆ ಮಾನ್ಯತೆ ದೊರಕಿದ ವಿಚಾರವಿದು. ನ್ಯಾಯಾಲಯದ ಗೌರವವನ್ನು ಹೆಚ್ಚು ಮಾಡಿದ ಸಂಗತಿಯಾಗಿದೆ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಧ್ವಂಸ ಮಾಡಿದ ಪ್ರಕರಣದ ಆರೋಪಿಗಳನ್ನು ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿರುವುದು ಸ್ವಾಗತಾರ್ಹ ಮತ್ತು ಧರ್ಮಕ್ಕೆ ಸಂದ ಜಯ ಎಂದು ಅಯೋಧ್ಯೆ ಕರಸೇವೆಯಲ್ಲಿ ರಾಜ್ಯದ ಮುಂಚೂಣಿ ನಾಯಕರಾಗಿದ್ದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಯಾವ ಕಾರಣಕ್ಕೂ ಅಡ್ವಾಣಿ ಮತ್ತಿತರ ನಾಯಕರು ಕಟ್ಟಡ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿಲ್ಲ. ತೀರ್ಪು, ಹಿಂದೂಗಳ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಹಾಗೂ ಗೌರವವನ್ನು ಕಾಪಾಡಿದ್ದು, ಧರ್ಮಕ್ಕೆ ಜಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.