ಮಂಗಳೂರು: ರಾಜ್ಯ ಬಿಜೆಪಿ ವಕ್ತಾರ ಸಿ ಟಿ ರವಿ ಅವರು ಅವಾಚ್ಯ ಶಬ್ದ ಬಳಸಿರುವ ಕುರಿತು ಸಚಿವೆ ಜಯಮಾಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿ ಟಿ ರವಿ ಅವರ ನಾಲಗೆಯ ಚಪ್ಪಲಿಯ ಎಂದು ಪ್ರಶ್ನಿಸಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಸಿ ಟಿ ರವಿ ಅವರದು ನಾಲಗೆ ಇಷ್ಟು ಹೊಲಸು ಎಂದು ತಿಳಿದಿರಲಿಲ್ಲ. ಸಿ.ಟಿ ರವಿ ಅವರಿಗೆ ಅವರ ಅಮ್ಮ ಬಜೆ ಹಾಕಿಲ್ಲ ಎಂದು ಕಾಣುತ್ತೆ. ಅವರ ಹೇಳಿಕೆ ಯಾವ ತಾಯಂದಿರೂ ಕೂಡಾ ಕ್ಷಮಿಸದೆ ಇರುವಂತಹ ಹೇಳಿಕೆ. ನಾಲಿಗೆಯನ್ನು ಚಪ್ಪಲಿ ಮಾಡುವವರು, ಹೆಣ್ಣನ್ನು ಇಷ್ಟೊಂದು ಲಘುವಾಗಿ ಆಲೋಚನೆ ಮಾಡುವವರಿಗೆ ದೇಶದ ಬಗ್ಗೆ ಯಾವ ಚಿಂತನೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ದೂರು ನೀಡಲಾಗುವುದು ಎಂದು ತಿಳಿಸಿದ ಅವರು ಸಿ ಟಿ ರವಿಗೆ ಕೊರಿಯರ್ ಮೂಲಕ ಎರಡು ಪುಸ್ತಕಗಳಾದ ಅಮ್ಮ ಹೇಳಿದ ಎಂಟು ಸುಳ್ಳುಗಳು ಮತ್ತು ನನ್ನಮ್ಮ ಅಂದರೆ ನನಗಿಷ್ಟ ವನ್ನು ಕಳುಹಿಸಿ ಓದಿ ಅಮ್ಮನ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳುತ್ತೇವೆ. ಗಂಡಸರು ಅವರು ಅಪ್ಪನ ಬಗ್ಗೆ ಮಾತಾಡಲಿ. ಹೆಣ್ಮಕ್ಕಳ ಬಗ್ಗೆ ಮಾತಾಡುವುದಿದ್ದರೆ ಹುಷಾರಾಗಿ ಮಾತಾಡಲಿ. ಅವರು ತನ್ನ ತಾಯಿಗೂ ಇಂತ ಮಾತು ಹೇಳಿದರೂ ಅದನ್ನು ನಾವು ಖಂಡಿಸುತ್ತೇವೆ ಎಂದರು.