ETV Bharat / state

ಅನಂತಕುಮಾರ್ ಹೆಗಡೆ ಭಾರತೀಯನಾಗಲು ಕೂಡ ಯೋಗ್ಯರಲ್ಲ: ಐವನ್ ಡಿಸೋಜ ಟ್ವೀಟ್ - Iwan disoza latest tweet

ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳೆಂಬ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ಅವರು ಭಾರತೀಯನಾಗಲು ಕೂಡ ಯೋಗ್ಯರಲ್ಲ ಎಂದು ಐವನ್ ಡಿಸೋಜ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Iwan disoza tweet
Iwan disoza tweet
author img

By

Published : Aug 11, 2020, 5:12 PM IST

ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಅವರು ‘ಬಿಎಸ್ಎನ್ಎಲ್ ನೌಕರರು ದೇಶದ್ರೋಹಿ’ಗಳು ಎಂದು ನೀಡಿರುವ ಹೇಳಿಕೆಗೆ ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಟ್ವೀಟ್ ಮೂಲಕ ಟಾಂಗ್​ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಐವನ್ ಡಿಸೋಜ, ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳೆಂಬ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ಅವರು ಭಾರತೀಯನಾಗಲು ಕೂಡ ಯೋಗ್ಯರಲ್ಲ ಎಂದಿದ್ದಾರೆ.

ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ

"ದೇಶದ್ರೋಹಿಗಳನ್ನು ಪತ್ತೆ ಹಚ್ಚುವ ಅನಂತಕುಮಾರ್ ಹೆಗ್ಡೆಯವರೇ ನೀವು ಸಂಸದರಾಗಲು ಅಲ್ಲ, ಭಾರತೀಯನಾಗಲು ಕೂಡ ಯೋಗ್ಯರಲ್ಲ. ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೇ ಇದೀಗ ಬಡಪಾಯಿ ಬಿಎಸ್ಎನ್ಎಲ್ ನೌಕರರಿಗೆ ದೇಶದ್ರೋಹಿ ಪಟ್ಟವನ್ನು ಕಟ್ಟುತ್ತೀರಲ್ವ? ನಾಚಿಕೆಯಾಗಬೇಕು ಬಿಜೆಪಿಯವರಿಗೆ " ಎಂದು ಟ್ವೀಟ್ ಮಾಡಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.