ETV Bharat / state

ಸಂಸದೆ ಕರಂದ್ಲಾಜೆ ವಿರುದ್ಧ ಮಂಗಳೂರಿನಲ್ಲಿ ಐವನ್ ಡಿಸೋಜ ದೂರು - Ivan D'Souza complains against shobha karandlaje

ಕ್ರೈಸ್ತ ಸಮುದಾಯದವರಿಗೆ ಮಾನಸಿಕವಾಗಿ ನೋವನ್ನುಂಟು ಮಾಡಲಾಗಿದೆ ಎಂದು ಆರೋಪಿಸಿರುವ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಐವನ್ ಡಿಸೋಜ ಅವರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ivan-dsouza and shobha
ಸಂಸದೆ ಶೋಭಾ ಕರಂದ್ಲಾಜೆ ಹಾಗು ಐವನ್ ಡಿಸೋಜ
author img

By

Published : May 20, 2021, 8:24 PM IST

Updated : May 20, 2021, 8:34 PM IST

ಮಂಗಳೂರು: ಚರ್ಚ್​ಗಳಲ್ಲಿ ಕೋವಿಡ್ ಲಸಿಕೆ ಪಡೆಯಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಐವನ್ ಡಿಸೋಜ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ರೈಸ್ತ ಸಮುದಾಯದಲ್ಲಿ‌ ಕೋವಿಡ್ ಲಸಿಕೆ ಪಡೆಯದಂತೆ ಪ್ರಚಾರ ಮಾಡಲಾಗುತ್ತಿದೆ ಎಂದು ಯಾವುದೇ ಪುರಾವೆಗಳಿಲ್ಲದೆ ಸಂಸದೆ ಶೋಭಾ ಕರಂದ್ಲಾಜೆಯವರು ಸಮುದಾಯದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕ್ರೈಸ್ತ ಧರ್ಮದ ಧರ್ಮಗುರುಗಳು, ಅನುಯಾಯಿಗಳು ಆರೋಗ್ಯ ಇಲಾಖೆಯವರು ತೆಗೆದುಕೊಂಡ ತೀರ್ಮಾನವನ್ನು ಅಕ್ಷರಶಃ ಪಾಲಿಸುತ್ತಾರೆ. ಆದರೆ ಶೋಭಾ ಕರಂದ್ಲಾಜೆಯವರು ಕ್ರೈಸ್ತ ಸಮುದಾಯದವರಿಗೆ ಮಾನಸಿಕವಾಗಿ ನೋವನ್ನುಂಟು ಮಾಡಿ, ಸುಳ್ಳು ಆಪಾದನೆ ಮಾಡಿರುವ ಬಗ್ಗೆ ಈ ದೂರು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಓದಿ: ಸಂಜೆ ಮಳೆಗೆ ಸಿಲಿಕಾನ್ ಸಿಟಿ ಕೂಲ್: ಇನ್ನೆರಡು ದಿನ ವರ್ಷಧಾರೆ ಸಾಧ್ಯತೆ

Last Updated : May 20, 2021, 8:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.