ETV Bharat / state

ಕೋವಿಡ್ ನೆಪವೊಡ್ಡಿ ಸೆಂಟ್ರಲ್ ಮಾರುಕಟ್ಟೆ ಮುಚ್ಚಿದ್ದು ಸರಿಯಲ್ಲ: ಶಾಸಕ ಖಾದರ್

ಯಾವ ಆಧಾರದ ಮೇಲೆ ಮಂಗಳೂರು ಮ.ನ.ಪಾ ಮತ್ತೆ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚುವಂತೆ ಆದೇಶ ಮಾಡಿದೆ?. ಅಲ್ಲದೆ ಎಲ್ಲರೂ ಮತ್ತೆ ಎಪಿಎಂಸಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ. ಅಲ್ಲಿ‌ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಮಾತ್ರ ನಡೆಯುವುದೇ?, ಮಾಂಸ, ಕೋಳಿ ಇನ್ನಿತರ ಅಂಗಡಿಗಳ ವರ್ತಕರು ಎಲ್ಲಿಗೆ ಹೋಗಬೇಕು? ಎಂದು ಶಾಸಕ‌ ಯು.ಟಿ.ಖಾದರ್ ಪ್ರಶ್ನಿಸಿದರು.

ಶಾಸಕ‌ ಯು.ಟಿ.ಖಾದರ್
ಶಾಸಕ‌ ಯು.ಟಿ.ಖಾದರ್
author img

By

Published : Aug 19, 2020, 5:00 PM IST

ಮಂಗಳೂರು: ಕೋವಿಡ್ ನೆಪವೊಡ್ಡಿ ಜಿಲ್ಲಾಡಳಿತ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೆ ಎಪಿಎಂಸಿಯನ್ನು ರದ್ದುಪಡಿಸಿರುವ ಬಿಜೆಪಿ ಸರ್ಕಾರ ಮಾರುಕಟ್ಟೆಯನ್ನು ಮುಚ್ಚಿ ವರ್ತಕರನ್ನು ಮತ್ತೆ ಎಪಿಎಂಸಿಗೆ ತೆರಳಲು ಯಾವ ರೀತಿ ಆದೇಶಿಸುತ್ತಿದೆ?. ಎಪಿಎಂಸಿಯೇ ಇಲ್ಲದ ಬಳಿಕ ವ್ಯಾಪಾರಿಗಳು ಅಲ್ಲಿಗೆ ಹೋಗುವುದು ಹೇಗೆ? ಎಂದು ಶಾಸಕ‌ ಯು.ಟಿ.ಖಾದರ್ ಕೇಳಿದ್ದಾರೆ.

ಶಾಸಕ‌ ಯು.ಟಿ.ಖಾದರ್

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ವ್ಯಾಪಾರ ಮಾಡಲು ಎಲ್ಲಿಯೂ ಅವಕಾಶ ಇದೆ ಎಂದು ಕಾನೂನು ತಂದಿದ್ದು ಬಿಜೆಪಿ ಸರ್ಕಾರ. ಆದ್ದರಿಂದ ಹೊಸ ಕಾನೂನಿನ ಪ್ರಕಾರ, ವ್ಯಾಪಾರ ನಡೆಸಲು ಎಪಿಎಂಸಿ ಪರವಾನಗಿ ಯಾರಿಗೂ ಬೇಡ. ಎಲ್ಲಿಯೂ, ಯಾರಾದರೂ ವ್ಯಾಪಾರ ಮಾಡಬಹುದು. ಆದ್ದರಿಂದ ವ್ಯಾಪಾರ ಮಾಡುವ ಜನರಿಗೆ ಸರ್ಕಾರ ಸಹಕಾರ ನೀಡಬೇಕು ಎಂದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿ ಎಲ್ಲಿಯೂ ವ್ಯಾಪಾರ ಮಾಡಬಹುದು ಎಂದು ಹೇಳುತ್ತಿವೆ. ಹಾಗಾದರೆ ಇಲ್ಲಿನ ವ್ಯಾಪಾರಿಗಳು ಎಪಿಎಂಸಿಗೆ ಯಾಕೆ ಹೋಗಬೇಕು. ಖಾಸಗಿಯಾಗಿ ವ್ಯಾಪಾರ ಮಾಡಿಕೊಳ್ಳಲಿ. ಅದಕ್ಕೆ ಅವಕಾಶ ಕೊಡಿ. ಅಲ್ಲದೆ ನಾಳೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸಬೇಕು ಎಂದು ಸರ್ಕಾರ ಹೇಳಿದೆ. ಈ ಆದೇಶವನ್ನು ಹಿಂಪಡೆಯಬೇಕು. ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕವೇ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚಬೇಕು. ಖಾಸಗಿ ಮಾರುಕಟ್ಟೆ ಮಾಡಲು ಆಸಕ್ತಿ ಇರುವ ವ್ಯಾಪರಿಗಳಿಗೆ ಜಿಲ್ಲಾಧಿಕಾರಿಯವರು ಪರವಾನಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಹೆಸರು ಹೇಳಿ ಬಡ ವರ್ಗದ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯೋದು ಸರಿಯಲ್ಲ. ಅಲ್ಲದೆ ವ್ಯಾಪಾರಿಗಳಿಗೆ ಎಪಿಎಂಸಿಯಲ್ಲಿಯೇ ವ್ಯಾಪಾರ ನಡೆಸಬೇಕೆಂದು ಹೇಳಲು ಜಿಲ್ಲಾಡಳಿತಕ್ಕೆ ಅಧಿಕಾರವೂ ಇಲ್ಲ. ಇಂತಹ ಆದೇಶದಿಂದ ಜನರಿಗೂ ಗೊಂದಲವಾಗುತ್ತಿದೆ‌. ಕನಿಷ್ಟ ಕುಳಿತು ಚರ್ಚೆ ಮಾಡುವ ಯೋಗ್ಯತೆ ಮಂಗಳೂರು ಮನಪಾ, ಸ್ಥಳೀಯ ಶಾಸಕರಿಗೆ ಇಲ್ಲವಾ. ಅಲ್ಲದೆ ಇಂದು ನೋಟಿಸ್ ನೀಡಿ ನಾಳೆಯೇ ಮಾರುಕಟ್ಟೆ ಬಿಡಬೇಕೆನ್ನುವುದು ತಾಲಿಬಾನ್‌ನಲ್ಲಿಯೂ ನಡೆಯಲಿಕ್ಕಿಲ್ಲ ಎಂದು ಕಿಡಿಕಾರಿದರು.

ಜನಪ್ರತಿನಿಧಿಗಳು ಹೇಳಿದಂತೆ ಕೇಳುವ ಅಧಿಕಾರಿಗಳಿರುವುದೇ ನಮ್ಮ ಜಿಲ್ಲೆಯ ದುಸ್ಥಿತಿಯಾಗಿದೆ. ಯಾವ ಆಧಾರದ ಮೇಲೆ ಮಂಗಳೂರು ಮ.ನ.ಪಾ ಮತ್ತೆ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚುವಂತೆ ಆದೇಶ ಮಾಡಿದೆ?. ಅಲ್ಲದೆ ಎಲ್ಲರೂ ಮತ್ತೆ ಎಪಿಎಂಸಿಗೆ ಸ್ಥಳಾಂತರ ಗೊಳ್ಳುವಂತೆ ಆದೇಶಿಸಿದೆ. ಅಲ್ಲಿ‌ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಮಾತ್ರ ನಡೆಯುವುದೇ?, ಮಾಂಸ, ಕೋಳಿ ಇನ್ನಿತರ ಅಂಗಡಿಗಳ ವರ್ತಕರು ಎಲ್ಲಿಗೆ ಹೋಗಬೇಕು?. ಕೋವಿಡ್ ನಿಯಂತ್ರಣ ಮಾಡುವ ಉದ್ದೇಶ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇದ್ದಿದ್ದರೆ ಎಷ್ಟು ಜನರನ್ನು ತಪಾಸಣೆ ಮಾಡಿದ್ದಾರೆಂಬುದನ್ನು ವಿವರಣೆ ನೀಡಲಿ‌ ಎಂದು ಅಸಮಾಧಾನ ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.