ETV Bharat / state

ಬಂಟ್ವಾಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ಹಳ್ಳಿ ಹಳ್ಳಿಯಲ್ಲೂ ಪಾಸಿಟಿವ್​ ಪ್ರಕರಣ! - ಕೊರೊನಾ ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕೊರೊನಾ ಪ್ರಕರಣಗಳು ಬಂಟ್ವಾಳ ತಾಲೂಕಿನಲ್ಲಿಯೇ ಪತ್ತೆಯಾಗಿದ್ದು, ಜಿಲ್ಲೆಯ ಮೊದಲ ಪ್ರಕರಣ ಹಾಗೂ ಮೊದಲ ಸಾವು ಈ ತಾಲುಕಿನಲ್ಲಿಯೇ ಸಂಭವಿಸಿದೆ. ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದ್ದರೂ ಸಹ ಬಂಟ್ವಾಳ ತಾಲೂಕಿನಲ್ಲಿ ಮಾತ್ರ ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ತಾಲೂಕಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ.

Bantwal
ಬಂಟ್ವಾಳ
author img

By

Published : Jul 30, 2020, 1:11 PM IST

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೊರೊನಾ ಸೋಂಕಿನ ವಿಚಾರದಲ್ಲಿ ಮಾರ್ಚ್ ಅಂತ್ಯದ ವೇಳೆಗಾಗಲೇ ಸುದ್ದಿಯಾಗಿತ್ತು. ಜಿಲ್ಲೆಯ ಮೊದಲ ಕೇಸ್, ಜಿಲ್ಲೆಯ ಮೊದಲ ಮರಣ ಪ್ರಕರಣ ಬಂಟ್ವಾಳ ತಾಲೂಕಿನಲ್ಲೇ ಆಗಿದ್ದು, ಇದೀಗ ಒಂದೇ ದಿನ 38 ಪ್ರಕರಣಗಳು ಪತ್ತೆಯಾಗುವುದರ ಮೂಲಕ ಮತ್ತೆ ಹಾಟ್ ಸ್ಪಾಟ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪ್ರಕರಣ ಬಂಟ್ವಾಳ ತಾಲೂಕಿನ ಸಜೀಪಮೂಡದಲ್ಲಿ ಆಗಿದ್ದರೆ, ಏಪ್ರಿಲ್ 19ರಂದು ಬಂಟ್ವಾಳ ಪೇಟೆಯ ಮಹಿಳೆಯೋರ್ವರು ಕೊರೊನಾ ಸೋಂಕು ದೃಢಪಟ್ಟು ಮೃತರಾಗುವುದರೊಂದಿಗೆ ದ.ಕ ಜಿಲ್ಲೆಯ ಪ್ರಥಮ ಸಾವು ಬಂಟ್ವಾಳದ್ದಾಗಿತ್ತು. ಅದಾದ ಬಳಿಕ ಅಕ್ಕಪಕ್ಕದ ಮನೆಗಳ ಮೂವರು ಸೇರಿದಂತೆ 10ಕ್ಕೂ ಅಧಿಕ ಮಂದಿ ತಾಲೂಕಿನಲ್ಲಿ ಸಾವನ್ನಪ್ಪಿದ್ದಾರೆ. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲೂ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಬುಧವಾರದಂದು ಪುರಸಭಾ ವ್ಯಾಪ್ತಿಯ 9 ಮಂದಿ ಸೇರಿದಂತೆ ಬಂಟ್ವಾಳ ತಾಲೂಕಿನ 38 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡದ 33, 35, 37, 13, 30, 60 ವರ್ಷದ ವ್ಯಕ್ತಿಗಳಿಗೆ ಹಾಗೂ ಕಸ್ಬಾದ 48, 35, 39 ವರ್ಷದವರಿಗೆ ಸೇರಿದಂತೆ ಒಟ್ಟು 9 ಮಂದಿಗೆ, ವಿಟ್ಲಪಡ್ನೂರು ಗ್ರಾಮದ 7 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇನ್ನು ರಾಯಿ, ಪಂಜಿಕಲ್ಲು, ಪಜೀರು, ಅಮ್ಮುಂಜೆ, ಬೆಂಜನಪದವು, ಕಲಾಯಿ, ಮಣಿನಾಲ್ಕೂರು, ವಿಟ್ಲ, ಕಲ್ಲಡ್ಕ, ತುಂಬೆ, ಸಜೀಪಮುನ್ನೂರು, ಸೊರ್ನಾಡು, ಬೋಳಂತೂರುಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಪುರಸಭೆಯ ಮಹಿಳಾ ಸಿಬ್ಬಂದಿಯೋರ್ವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಬುಧವಾರ ಪುರಸಭಾ ಕಚೇರಿಯನ್ನು ಸೀಲ್ ಡೌನ್ ಮಾಡಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.