ETV Bharat / state

ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ : ಹಲವೆಡೆ ರಸ್ತೆ ಸಂಪರ್ಕ ಕಡಿತ

author img

By

Published : Jul 10, 2022, 4:51 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ- ತುಂಬಿ ಹರಿಯುತ್ತಿದೆ ಸುಬ್ರಹ್ಮಣ್ಯದ ಕುಮಾರಧಾರ ನದಿ- ನೆರೆಯಿಂದ ಹಲವೆಡೆ ರಸ್ತೆ ಸಂಚಾರ ಸ್ಥಗಿತ

in-subrahmanya-road-has-been-blocked-due-to-heavy-rain
ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ : ಹಲವೆಡೆ ರಸ್ತೆ ಸಂಪರ್ಕ ಕಡಿತ

ಸುಬ್ರಹ್ಮಣ್ಯ (ದಕ್ಷಿಣಕನ್ನಡ) : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಕುಮಾರಧಾರ ಸ್ನಾನಘಟ್ಟವು ಮುಳುಗಿದ್ದು, ಪಂಜ-ಪುತ್ತೂರು, ಕಡಬ-ಪಂಜ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕುಮಾರಧಾರ ನದಿಯು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸ್ನಾನಘಟ್ಟ ಮುಳುಗಡೆಯಾಗಿತ್ತು.

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪಂಜ - ಪುತ್ತೂರು ರಸ್ತೆಯು ಮುಳುಗಡೆಯಾಗಿದ್ದು, ಅದೇ ರೀತಿ ಕಡಬದಿಂದ ಪಂಜ ಸಂಪರ್ಕಿಸುವ ರಸ್ತೆಯ ಪುಳಿಕುಕ್ಕು ಎಂಬಲ್ಲಿ ರಾಜ್ಯ ಹೆದ್ದಾರಿಯು ನೆರೆ ನೀರಿನಿಂದಾಗಿ ಸಂಪರ್ಕ ಕಡಿತಗೊಂಡಿದೆ.

ಭಾನುವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಕುಮಾರಧಾರ ಮೋಟಾರ್ ಪಂಪ್ ಹಾಗೂ ಲಗೇಜು ಕೊಠಡಿಯ ಮುಂಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನದಿ ನೀರು ಬಂದಿದೆ. ಈ ನಡುವೆ ಕೆಲವರು ಅಪಾಯಕಾರಿ ರೀತಿಯಲ್ಲಿ ಹರಿಯುತ್ತಿರುವ ನದಿಗಳ ಸೇತುವೆಯ ಮೇಲೆ ಸೆಲ್ಫಿ, ಫೋಟೋ ಕ್ಲಿಕ್ಕಿಸುವ ಹುಚ್ಚುತನ ಪ್ರದರ್ಶಿಸುತ್ತಿದ್ದಾರೆ.

ಓದಿ : ಕೆಆರ್​ಎಸ್​ ತುಂಬಲು ಒಂದೇ ಅಡಿ ಬಾಕಿ.. ರಾಜ್ಯದ ಇತರೆ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.