ಮಂಗಳೂರು: ನಗರದ ಖ್ಯಾತ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸದೇ ಸೂಪರ್ ಮಾರ್ಕೆಟ್ಗೆ ಹೋಗಿ ಅಲ್ಲಿ ಸಿಬ್ಬಂದಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿರೋದನ್ನು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಖಂಡಿಸಿದೆ.
![mangaluru](https://etvbharatimages.akamaized.net/etvbharat/prod-images/10:15:27:1621442727_kn-mng-05-ima-khandane-script-ka10015_19052021215306_1905f_1621441386_938.jpg)
ಐಎಂಎ ಹಾಗೂ ಅಸೋಸಿಯೇಷನ್ನ ಮೆಡಿಕಲ್ ಕನ್ಸಲ್ಟೆಂಟ್ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಮೀರಿ ಬೇಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಐಎಂಎ ಹೇಳಿದೆ.
ಅದೇ ರೀತಿ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿ, ಕೈಶುಚಿಯಾಗಿರಿಸಿ ಡಬ್ಲ್ಯುಎಚ್ಒ ನಿಯಮಾವಳಿಗಳನ್ನು ಪಾಲಿಸಬೇಕು. ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಿ ಕೊರೊನಾ ಸೋಂಕು ಹರಡದಂತೆ ತಡೆದು ಇತರ ಜೀವಗಳನ್ನು ರಕ್ಷಿಸಿ ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ.