ETV Bharat / state

ಮಂಜನಾಡಿಯಲ್ಲಿ ಗಾಂಜಾ ಸಾಗಾಟ ಪತ್ತೆ: 23 ಕೆಜಿ ವಶ - Illegally marijuana sale news inmangaklore

ಮಂಗಳೂರಿನ ಮಂಜನಾಡಿ ಗ್ರಾಮದ ವಿಜಯನಗರ ಎಂಬಲ್ಲಿ ಬೈಕ್​ನಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದಅಬ್ದುಲ್ ಖಾದರ್ ತನ್ಸಿಫ್ ಯಾನೆ ತನ್ಸಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಈತನಿಂದ 23 ಕೆ ಜಿ 480 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಹಾಗೂ ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಎಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆ
ಎಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆ
author img

By

Published : Nov 2, 2020, 10:59 PM IST

ಮಂಗಳೂರು: ಮಂಜನಾಡಿಯಲ್ಲಿ ನಡೆಯುತ್ತಿದ್ದ ಗಾಂಜಾ ಸಾಗಾಟ ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು‌ ಬಂಧಿಸಿ, ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಂಗಳೂರು ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ ಅಬ್ದುಲ್ ಖಾದರ್ ತನ್ಸಿಫ್ ಯಾನೆ ತನ್ಸಿ (23) ಬಂಧಿತ ಆರೋಪಿ. ಈತ ಮಂಜನಾಡಿ ಗ್ರಾಮದ ವಿಜಯನಗರ ಎಂಬಲ್ಲಿ ಬೈಕ್​ನಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ. ಈತನಿಂದ 23 ಕೆ ಜಿ 480 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಹಾಗೂ ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಳ್ಳಲಾದ ಗಾಂಜಾದ ಮೌಲ್ಯ 2 ಲಕ್ಷ 34 ಸಾವಿರದ 800 ಎಂದು ಅಂದಾಜಿಸಲಾಗಿದೆ. ಮಂಗಳೂರಿನ ಕೋಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಎಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.