ETV Bharat / state

ದ.ಕ ಜಿಲ್ಲೆಯಲ್ಲಿ ರೆಡ್ ಬಾಕ್ಸೈಟ್ ದಂಧೆ ಆರೋಪ: ಪೊಲೀಸರಿಂದ ತನಿಖೆ ಚುರುಕು

author img

By

Published : Oct 9, 2020, 1:33 PM IST

ಅಕ್ರಮವಾಗಿ ಮುರ ಮಣ್ಣು ಹೊರ ರಾಜ್ಯಕ್ಕೆ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ತಪಾಸಣೆ ನಡೆಸಲಾಗಿದೆ. ಅಕ್ರಮವಾಗಿ ಮಣ್ಣು ದಂಧೆ ನಡೆಸುತ್ತಿರುವವರ ಸೊತ್ತುಗಳನ್ನು ವಶಪಡಿಸಿಕೊಂಡು ಕೋರ್ಟ್​​ಗೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗ ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

Illegal  Red bauxite mud business in dakshina kannada
ದ.ಕ. ಜಿಲ್ಲೆಯಲ್ಲಿ ರೆಡ್ ಬಾಕ್ಸೈಟ್ ದಂಧೆ ಆರೋಪ; ಪೊಲೀಸರ ತನಿಕೆ ಚುರುಕು

ಮಂಗಳೂರು: ದ.ಕ ಜಿಲ್ಲೆಯಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಯುತ್ತಿದ್ದು, ಅಕ್ರಮವಾಗಿ ಹೊರ ರಾಜ್ಯಗಳಿಗೆ ಮಣ್ಣು ಸಾಗಾಟ ಮಾಡಲಾಗುತ್ತಿದೆಯೆಂಬ ಆರೋಪಗಳು ಕೇಳಿ ಬರುತ್ತಿದೆ. ಸದ್ಯ ಅಕ್ರಮವಾಗಿ ಮಣ್ಣು ದಂಧೆ ನಡೆಸುತ್ತಿರುವವರ ಸೊತ್ತುಗಳನ್ನು ವಶಪಡಿಸಿಕೊಂಡು ಕೋರ್ಟ್​​ಗೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗ ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

ಮಂಗಳೂರು ಹೊರವಲಯದ ಮುಡಿಪು, ಇರಾ, ಬಾಳೆಪುಣಿ, ಇನ್ನೋಳಿ‌ ಮುಂತಾದ ಕಡೆಗಳಲ್ಲಿ ಅಕ್ರಮವಾಗಿ ರೆಡ್ ಬಾಕ್ಸೈಟ್ ಅಂಶವಿರುವ ಗಟ್ಟಿ ಮುರ ಮಣ್ಣನ್ನು ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಗೆ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇದರಿಂದ ಪ್ರಾಕೃತಿಕ ಸಂಪತ್ತಿನ ಲೂಟಿಯಾಗುತ್ತಿದೆ. ಖಾಸಗಿ ಭೂಮಿಯನ್ನು ಲೀಸ್​​ಗೆ ಪಡೆದುಕೊಂಡು ಮಣ್ಣು ಸಾಗಾಟ ಮಾಡುವ ದಂಧೆಕೋರರು ಸರ್ಕಾರಿ ಭೂಮಿಯಲ್ಲಿಯೂ ಅಕ್ರಮವಾಗಿ ಮಣ್ಣು ದಂಧೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಟನ್​​ಗೆ 2,500 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಜಾಗದ ಮಾಲೀಕನಿಗೂ ಸಹ ಒಂದು ಲೋಡ್ ಮಣ್ಣಿನಲ್ಲಿ 300-500 ರೂ. ದೊರಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪ್ರತಿನಿತ್ಯ 200-300 ಲೋಡ್​​ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ‌.

ರೆಡ್ ಬಾಕ್ಸೈಟ್ ದಂಧೆ ಆರೋಪ

ಸಿಮೆಂಟ್ ತಯಾರಿಕೆಯಲ್ಲಿ‌ ಈ ಮಣ್ಣನ್ನು‌‌ ಬಳಕೆ ಮಾಡಲಾಗುತ್ತದೆ‌‌. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂಲದ ಸಿಮೆಂಟ್ ತಯಾರಿಕಾ ಕಂಪನಿಗಳು ಈ ಮಣ್ಣನ್ನು ಖರೀದಿ ಮಾಡುತ್ತಿವೆ. ಇದರಲ್ಲಿ ಹೊರ ರಾಜ್ಯಗಳ ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಣ್ಣು ಗಣಿಗಾರಿಕೆ ನಡೆಸಲು ದ.ಕ ಜಿಲ್ಲೆಯಲ್ಲಿ 10 ಮಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ದೊರೆತಿದೆ. ಆದರೆ ಇಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಮೂರು-ನಾಲ್ಕು ವರ್ಷಗಳಿಂದ ನೂರಾರು ಎಕರೆ ಭೂಮಿಗಳಲ್ಲಿ ದಂಧೆ ನಡೆಯುತ್ತಿದೆ‌.

ಈ ಬಗ್ಗೆ ಮಂಗಳೂರು ಉಪ ವಿಭಾಗ ಎಸಿ ಮದನ್ ಮೋಹನ್ ಮಾತನಾಡಿ, ಅಕ್ರಮವಾಗಿ ಮುರ ಮಣ್ಣು ಹೊರ ರಾಜ್ಯಕ್ಕೆ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ತಪಾಸಣೆ ನಡೆಸಲಾಗಿದೆ. ಅಕ್ರಮವಾಗಿ ಮಣ್ಣು ದಂಧೆ ನಡೆಸುತ್ತಿರುವವರ ಸೊತ್ತುಗಳನ್ನು ವಶಪಡಿಸಿಕೊಂಡು ಕೋರ್ಟ್​​ಗೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.