ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನೌಶಾದ್ ತ್ರಿಕ್ಕುಲಾಥ್(37) ಬಂಧಿತ ಆರೋಪಿ. ದುಬೈನಿಂದ ಏರ್ ಇಂಡಿಯಾ ಐಎಕ್ಸ್ 384 ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಆರೋಪಿಯನ್ನು ಅಧಿಕಾರಿಗಳು ಪದ್ಧತಿಯಂತೆ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಗುದದ್ವಾರದೊಳಗೆ 802 ಗ್ರಾಂ ತೂಕದ 37.29 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.
ಇದನ್ನೂ ಓದಿ: ಉಂಡು ಮಲಗಿದರೂ ಮುಗಿಯದ ಮುನಿಸು: ನೇಣಿಗೆ ಶರಣಾದ ಇಬ್ಬರು ಗಂಡಂದಿರು
ತಕ್ಷಣ ಅಕ್ರಮ ಚಿನ್ನಸಹಿತ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದರು.