ETV Bharat / state

ಅಕ್ರಮ ವಿದೇಶಿ ಕರೆನ್ಸಿ ಸಾಗಾಟ: ಓರ್ವನ ಬಂಧನ

4.10 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ದುಬೈಗೆ ಸಾಗಿಸುತ್ತಿದ್ದ ಓರ್ವ ಆರೋಪಿಯನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಅಕ್ರಮ ವಿದೇಶಿ ಕರೆನ್ಸಿ ಸಾಗಾಟ: ಓರ್ವನ ಬಂಧನ
author img

By

Published : Jul 31, 2019, 7:53 PM IST

ಮಂಗಳೂರು: 4.10 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಅಕ್ರಮವಾಗಿ ದುಬೈಗೆ ಸಾಗಿಸುತ್ತಿದ್ದ ಓರ್ವ ಆರೋಪಿಯನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಅಕ್ರಮ ವಿದೇಶಿ ಕರೆನ್ಸಿ ಸಾಗಾಟ: ಓರ್ವನ ಬಂಧನ

ಅಬ್ದುಲ್ ರಜಾಕ್ ಬಂಧಿತ ಆರೋಪಿ. ಈತನಿಂದ 11,600 ಸೌದಿ ರಿಯಾಲ್ ಮತ್ತು 11,000 ಯುಎಇ ದಿರ್‌ಹಂಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣದ ಒಟ್ಟು ಮೌಲ್ಯ 4.10 ಲಕ್ಷ ರೂ. ಎಂದು ತಿಳಿದು ಬಂದಿದೆ. ಅಬ್ದುಲ್ ರಜಾಕ್​ ವಿದೇಶಿ ಕರೆನ್ಸಿಯನ್ನ ಒಳ ಉಡುಪಿನಲ್ಲಿಟ್ಟುಕೊಂಡು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟ್ಟಿದ್ದ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ರಾಕೇಶ್‌ ಕುಮಾರ್ ಕಾರ್ಯಚರಣೆ ವೇಳೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Intro:ಮಂಗಳೂರು: ದುಬೈಗೆ 4.10 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ರಝಾಕ್ ಎಂ. ಬಂಧಿತ ಆರೋಪಿ.

ಈತನಿಂದ 11,600 ಸೌದಿ ರಿಯಾಲ್ ಮತ್ತು 11,000 ಯುಎಇ ದಿರ್‌ಹಂಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣದ ಒಟ್ಟು ಮೌಲ್ಯ 4.10 ಲಕ್ಷ ರೂ. ಎಂದು ತಿಳಿದು ಬಂದಿದೆ. ಈತ ಒಳ ಉಡುಪಿನಲ್ಲಿಟ್ಟು ಈ‌ ವಿದೇಶಿ ಕರೆನ್ಸಿಯನ್ನು ಸಾಗಾಟಕ್ಕೆ ಯತ್ನಿಸಿದ್ದ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

Body:ಅಬ್ದುಲ್ ರಝಾಕ್ ಈ ವಿದೇಶಿ ಕರೆನ್ಸಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುವ ವಿಮಾನದ ಮೂಲಕ ಸಾಗಾಟಕ್ಕೆ ಯತ್ನಿಸುತ್ತಿದ್ದ. ಈ ಸಂದರ್ಭ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಸಿಐಎಸ್‌ಎಫ್ ಎಸ್‌ಐ ರಾಕೇಶ್‌ಕುಮಾರ್ ವಿದೇಶಿ ಕರೆನ್ಸಿಯ ಕಳ್ಳ ಸಾಗಾಟವನ್ನು ಪತ್ತೆ ಮಾಡಿದ್ದಾರೆ. ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.