ETV Bharat / state

ಮಂಗಳೂರು: ಅಕ್ರಮ ಸ್ಫೋಟಕ ಸಾಮಗ್ರಿ ದಾಸ್ತಾನು ಪತ್ತೆ: ಓರ್ವನ ಬಂಧನ .. - Illegal Explosive Ammunition Detection by police in mangalore

ಆರೋಪಿ ನಗರದಲ್ಲಿ ಗನ್ ಶಾಪ್ ಹೊಂದಿದ್ದ. ಆದರೆ, ಯಾವುದೇ ಪರವಾನಗಿ ಇಲ್ಲದೇ ಈ ಸ್ಫೋಟಕ ಸಾಮಗ್ರಿಗಳನ್ನು ಖಾಸಗಿಯಾಗಿ ದಾಸ್ತಾನು ಮಾಡಿದ್ದ. ಆ ಕಟ್ಟಡದಲ್ಲಿ ಮೇಲಿನ ಮಹಡಿಯಲ್ಲಿ ವಸತಿ ಸಮುಚ್ಚಯವಿದ್ದು, 20-30 ಕುಟುಂಬಗಳು ವಾಸವಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದರು.

illegal-explosive
ಸ್ಫೋಟಕ
author img

By

Published : Aug 16, 2021, 4:11 PM IST

Updated : Aug 16, 2021, 4:58 PM IST

ಮಂಗಳೂರು: ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯಲ್ಲಿ ಪರವಾನಗಿ ಇಲ್ಲದೇ ಸ್ಫೋಟಕ ಸಾಮಗ್ರಿ ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ಬಂಧಿಸಿ ಒಂದು ಲಕ್ಷ ರೂ ಗೂ ಅಧಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್

ನಗರದ ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ(50) ಬಂಧಿತ ವ್ಯಕ್ತಿ. ಕಟ್ಟಡದ ಮೆಟ್ಟಿಲುಗಳ ಕೆಳಗಡೆ ಇರುವ ಖಾಲಿ ಜಾಗದಲ್ಲಿ ಕೊಠಡಿ ರೀತಿಯಲ್ಲಿ ಬಳಸಿ ಆರೋಪಿ‌ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ದಾಸ್ತಾನು ಇರಿಸಿದ್ದ. ಇದರಲ್ಲಿ ಸಲ್ಫರ್ ಪುಡಿ, ಕಲ್ಲಿದ್ದಲು, ಪೊಟಾಷಿಯಂ ನೈಟ್ರೇಟ್, ಪೊಟಾಷಿಯಂ ಕ್ಲೋರೇಟ್, ಬೇರಿಯಂ ನೈಟ್ರೇಟ್, ಅಲ್ಯೂಮಿನಿಯಂ ಪುಡಿ, ಏರ್ ರೈಫಲ್ ಪಿಲ್ಲೆಟ್, ಲೆಡ್​ಬಾಲ್​ ಇತ್ಯಾದಿ ಸ್ಪೋಟಕ ಸಾಮಗ್ರಿಗಳು ಪತ್ತೆಯಾಗಿವೆ.

ತಕ್ಷಣ ಎಲ್ಲ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 1,11,140 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಈ ಬಗ್ಗೆ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ಲಭ್ಯವಾಗಿಲ್ಲ : ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿದರು. ಆರೋಪಿಯು ನಗರದಲ್ಲಿ ಗನ್ ಶಾಪ್ ಹೊಂದಿದ್ದ. ಆದರೆ, ಯಾವುದೇ ಪರವಾನಗಿ ಇಲ್ಲದೆ ಈ ಸ್ಫೋಟಕ ಸಾಮಗ್ರಿಗಳನ್ನು ಖಾಸಗಿಯಾಗಿ ದಾಸ್ತಾನು ಮಾಡಿದ್ದ. ಆ ಕಟ್ಟಡದಲ್ಲಿ ಮೇಲಿನ ಮಹಡಿಯಲ್ಲಿ ವಸತಿ ಸಮುಚ್ಚಯವಿದ್ದು, 20-30 ಕುಟುಂಬಗಳು ವಾಸವಿದೆ. ಬಹಳಷ್ಟು ಮಂದಿ‌ ಮಕ್ಕಳು ಅದೇ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಅಚನಕ್ಕಾಗಿ ಸ್ಫೋಟಗೊಂಡಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದರೆ, ಭಯೋತ್ಪಾದನಾ ಚಟುವಟಿಕೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.

ಓದಿ: ಮಂಡ್ಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ: ಭತ್ತದ ನಾಟಿ ಮಾಡಿ ಗಮನ ಸೆಳೆದ ಶೋಭಾ ಕರಂದ್ಲಾಜೆ

Last Updated : Aug 16, 2021, 4:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.