ETV Bharat / state

ಅಕ್ರಮ ಗೋ ಸಾಗಣೆ: ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು - Belthangadi latest news

ಬೆಳ್ತಂಗಡಿಯ ಕನ್ಯಾಡಿ ಸಮೀಪ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Beltangadi
Beltangadi
author img

By

Published : Jul 29, 2020, 9:41 AM IST

ಬೆಳ್ತಂಗಡಿ: ಲಾರಿಯಲ್ಲಿ‌‌ ಹಿಂಸಾತ್ಮಕವಾಗಿ ಗೋ ಸಾಗಣೆ ನಡೆಸುತ್ತಿದ್ದ ಆರೋಪಿಗಳನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಲಾರಿ ಸಮೇತ ಪೊಲೀಸರಿಗೊಪ್ಪಿಸಿದ್ದಾರೆ.

ಅಂಡಿಂಜೆ ಗ್ರಾಮದ ಅಬ್ದುಲ್‌ ಸಲಾಂ ಜಿ.(30), ಸಾವ್ಯ ಗ್ರಾಮದ ನೆಲ್ಲಿಗುಡ್ಡೆ ಮನೆ ಎಂ.ಅಕ್ಬರ್‌ (26) ಸಾವ್ಯ ಗ್ರಾಮದ ದರ್ಖಾಸು ಮನೆ ಸಂಜೀವ ಪೂಜಾರಿ (41) ಬಂಧಿತ ಆರೋಪಿಗಳು.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾಡಿ ಸಮೀಪ ಆರೋಪಿಗಳು ಅಕ್ರಮವಾಗಿ ಹಸುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದರು. ಇದನ್ನು ಪತ್ತೆಹಚ್ಚಿದ ಬಜರಂಗದಳದ ಕಾರ್ಯಕರ್ತರು, ಲಾರಿ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತಂತೆ ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 8 ಹಸುಗಳು ಮತ್ತು 1 ಹೋರಿ ಸೇರಿ ಒಟ್ಟು 09 ಜಾನುವಾರು ಹಾಗೂ ಲಾರಿ ಸೇರಿ ಒಟ್ಟು 8,90,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.