ETV Bharat / state

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಫಿವರ್​ ಕ್ಲಿನಿಕ್​​ಗೆ ಭೇಟಿ ನೀಡಿ: ದ.ಕ ಜಿಲ್ಲಾಧಿಕಾರಿ ಮನವಿ - If you find Covid symptoms, visit the Fever clinic immediately

ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜು​ಗಳು, ತಾಲೂಕು ಆಸ್ಪತ್ರೆ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕೂಡ ಫಿವರ್​ ಕ್ಲಿನಿಕ್​ ಸೌಲಭ್ಯ ಇದೆ. ಆದ್ದರಿಂದ ಕೋವಿಡ್ ಸಂಬಂಧಿ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸಾರ್ವಜನಿಕರಿಗೆ ವಿನಂತಿ ಮಾಡಿದ್ದಾರೆ.

If you find Covid symptoms, visit the Fever clinic immediately

author img

By

Published : Apr 20, 2020, 9:46 AM IST

ಮಂಗಳೂರು : ಕೋವಿಡ್ ಸಂಬಂಧಿ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಅಥವಾ ಫಿವರ್ ಕ್ಲಿನಿಕ್​​​ಗೆ ಭೇಟಿ ನೀಡಿ ಎಂದು ನಾಗರಿಕರಿಗೆ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ ಮಾಡಿದ್ದಾರೆ.

ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳು, ತಾಲೂಕು ಆಸ್ಪತ್ರೆ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕೂಡ ಫಿವರ್ ಕ್ಲಿನಿಕ್ ಇದೆ. ಆದ್ದರಿಂದ ಕೋವಿಡ್ ಸಂಬಂಧಿ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ಆದಷ್ಟು ಬೇಗ ಸೋಂಕು ಗುಣ ಆಗುವಂತೆ ನೋಡಿಕೊಳ್ಳಬಹುದು. ಈಗಾಗಲೇ 12 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ
ಫೆಬ್ರವರಿಯಿಂದಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕು ಸಂಬಂಧಿಸಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದೇಶಗಳಿಂದ ಬಂದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರ ಕ್ವಾರಂಟೈನ್ ಸಂಪೂರ್ಣ ಮುಗಿಸುವಂತೆ ಎಚ್ಚರಿಕೆ ವಹಿಸಿದ್ದೇವೆ. ನಮ್ಮ ಗಮನಕ್ಕೆ ಬಾರದೆ ಯಾರಾದರೂ ವಿದೇಶದಿಂದ ಬಂದವರಿದ್ದರೆ ಜಿಲ್ಲಾಡಳಿತಕ್ಕೆ ತಿಳಿಸಿ ಎಂದು ಮನವಿ ಕೂಡಾ ಮಾಡಿದ್ದೇವೆ ಎಂದು ಹೇಳಿದರು.ಜ್ವರ, ಶೀತ, ನೆಗಡಿ, ಉಸಿರಾಟದ ಸಮಸ್ಯೆ ಮುಂತಾದ ಯಾವುದೇ ಕೋವಿಡ್ ಸಂಬಂಧಿ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ಬಹಳಷ್ಟು ಮಂದಿ ಜ್ವರ ಬಂದಾಗ ಆರೋಗ್ಯ ಇಲಾಖೆಗೆ ತಿಳಿಸದೆ ಹತ್ತಿರದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬಂದಿದೆ. ಇಲ್ಲಿಯವರೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿತ್ತು. ಇನ್ನು ಮುಂದೆ ಇದಕ್ಕಿಂತಲೂ ಹೆಚ್ಚಿನ ಸಹಕಾರ ದೊರಕಬೇಕಿದೆ. ಈ ಮೂಲಕ ನಾವು ಕೋವಿಡ್ ಸೋಂಕನ್ನು ಮಣಿಸಬೇಕಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.