ಬಂಟ್ವಾಳ: ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಗುಡ್ಡದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಮನೆಯೊಂದರ ಸ್ನಾನದ ಕೊಠಡಿಗೆ ಬಿದ್ದ ಘಟನೆ ನಿನ್ನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಡಿಪಿಐ ತಂಡದ ಬಂಡೆಯನ್ನು ಒಡೆದು ತೆರವು ಮಾಡಿದೆ.
ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಇಬ್ರಾಹಿಮ್ ಅವರ ಮನೆಯ ಹಿಂಬದಿಯಲ್ಲಿರುವ ಗುಡ್ಡದಿಂದ ಬಂಡೆಕಲ್ಲು ಉರುಳಿದೆ. ಇದರಿಂದ ಸ್ನಾನಗೃಹ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಒಂದು ವೇಳೆ ಮನೆಯೊಳಗಡೆ ಕಲ್ಲು ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಗಳಿತ್ತು.
ಈ ಮಾಹಿತಿ ತಿಳಿದ ಕೊಳ್ನಾಡು ಗ್ರಾಮದ ಎಸ್ಡಿಪಿಐ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಮೊದಲು ಕಲ್ಲನ್ನು ಒಡೆದು ತೆಗೆಯಲು ಪ್ರಯತ್ನಿಸಿದರು. ಬಂಡೆ ಕಲ್ಲನ್ನು ಬಹುತೇಕ ತೆಗೆದು ರಾತ್ರಿಯಾದಂತೆ ಯಂತ್ರ ಬಳಸಿ ಕಲ್ಲನ್ನು ತೆರವುಗೊಳಿಸಿದರು. ಸಂಜೆ 6 ಗಂಟೆಗೆ ಕೆಲಸ ಶುರುಮಾಡಿದ ತಂಡ ರಾತ್ರಿ 11ಗಂಟೆಯ ವೇಳೆ ಸಂಪೂರ್ಣ ತೆರವುಗೊಳಿಸಿದರು.
ಎಸ್ಡಿಪಿಐ ವಿಪತ್ತು ನಿರ್ವಹಣಾ ತಂಡದ ಜವಾಬ್ದಾರಿಯನ್ನು ಪಾಪ್ಯುಲರ್ ಫ್ರಂಟ್ ಪರ್ತಿಪ್ಪಾಡಿ ಯುೂನಿಟ್ ಅಧ್ಯಕ್ಷ ಅನೀಸ್ ಕುಡುತ್ತಮೊಗೆರು ಮತ್ತು ಎಸ್ಡಿಪಿಐ ಕೊಳ್ನಾಡು ಸಾಲೆತ್ತೂರು ವಲಯದ ಅಧ್ಯಕ್ಷ ಲತೀಫ್ ಸಾಲೆತ್ತೂರು ವಹಿಸಿದ್ದರು.