ETV Bharat / state

ಪ್ರತ್ಯೇಕ ಘಟನೆ: ಸಮುದ್ರ ಪಾಲಾಗುತ್ತಿದ್ದ ಯುವಕ, ಮಗುವನ್ನು ರಕ್ಷಿಸಿದ ಗೃಹರಕ್ಷಕ ದಳ - ಉಳ್ಳಾಲದಲ್ಲಿ ಸಮುದ್ರ ಪಾಲಾಗುತ್ತಿದ್ದ ಯುವಕ ಹಾಗೂ ಮಗುವನ್ನು ರಕ್ಷಿಸಿದ ಗೃಹರಕ್ಷಕ ದಳ

ಅರ್ಧ ಗಂಟೆ ಅವಧಿಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಮಗು ಹಾಗೂ ಯುವಕನೋರ್ವನನ್ನು ಗೃಹರಕ್ಷಕದಳ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.

ಸೋಮೇಶ್ವರ ಸಮುದ್ರ ತೀರ
ಸೋಮೇಶ್ವರ ಸಮುದ್ರ ತೀರ
author img

By

Published : Jan 30, 2022, 9:46 PM IST

ಉಳ್ಳಾಲ(ದಕ್ಷಿಣ ಕನ್ನಡ) : ಪ್ರತ್ಯೇಕ ಘಟನೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಮಗು ಹಾಗೂ ಯುವಕನೋರ್ವನನ್ನು ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ನಡೆದಿದೆ. ಬೋಳಿಯಾರು ನಿವಾಸಿ ಶರೀಫ್(22) ಮತ್ತು ಎರಡು ವರ್ಷದ ಮಗುವನ್ನು ರಕ್ಷಿಸಲಾಗಿದೆ.

ಶರೀಫ್ ಗೃಹರಕ್ಷಕ ದಳ ಸಿಬ್ಬಂಧಿ ರಕ್ಷಿಸಿದ ಯುವಕ
ಶರೀಫ್ ಗೃಹರಕ್ಷಕ ದಳ ಸಿಬ್ಬಂದಿ ರಕ್ಷಿಸಿದ ಯುವಕ

ಅರ್ಧ ಗಂಟೆ ಅವಧಿಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಎರಡು ಜೀವಗಳನ್ನು ಗೃಹರಕ್ಷಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ನೇಹಿತರ ಜೊತೆಗೆ ವಿಹಾರಕ್ಕೆಂದು ಬಂದಿದ್ದ ಶರೀಫ್ ಅಲೆಗಳ ನಡುವೆ ಸಿಲುಕಿ ಜೀವರಕ್ಷಣೆಗೆ ಒದ್ದಾಡುತ್ತಿದ್ದರು. ಇದನ್ನು ಗಮನಿಸಿ ಸ್ಥಳದಲ್ಲಿದ್ದ ಗೃಹರಕ್ಷಕ ದಳ ಸಿಬ್ಬಂದಿ ಕಲ್ಲುಗಳೆಡೆಯಲ್ಲಿ ಸಿಲುಕಿದ್ದ ಶರೀಫ್​​ನನ್ನು ರಕ್ಷಿಸಿದರು.

ಅರ್ಧ ಗಂಟೆ ಅವಧಿಯಲ್ಲಿ ಸಂಭವಿಸಿದ ಇನ್ನೊಂದು ಘಟನೆಯಲ್ಲಿ ಸಮುದ್ರದಲ್ಲಿ ವಿಹರಿಸುತ್ತಿದ್ದ ತಾಯಿ ಕೈಯಿಂದ ಮಗು ಸಮುದ್ರಕ್ಕೆ ಬಿದ್ದಿದ್ದು, ತಕ್ಷಣ ಮತ್ತೊಮ್ಮೆ ಸಮುದ್ರಕ್ಕೆ ಹಾರಿದ ಗೃಹರಕ್ಷಕ ದಳ ಸಿಬ್ಬಂದಿ ಮಗುವನ್ನು ಸಹ ಕಾಪಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಶೋಕ್, ಸುನಿಲ್, ಕಿಶನ್ ಪಾಲ್ಗೊಂಡಿದ್ದರು.

ಜಾಹೀರಾತು :ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.