ಕಡಬ : ತಾಲೂಕಿನ ಎಡಮಂಗಲ ಗ್ರಾಮದ ಕಜೆತಡ್ಕದ ಬಾಲಕಿ ಎಂಬ ದಲಿತ ಮಹಿಳೆಯ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಆದರೆ, ಈಗ ಸುಳ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಈಕೆಯ ಕುಟುಂಬಕ್ಕೆ ವಾಸಿಸಲು ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಮನೆ ಕೆಡವಿದ ಸಂಬಂಧ ಪುತ್ತೂರು ಡಿವೈಎಸ್ಪಿ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಕುಟುಂಬದ ನೆರವಿಗೆ ಬಂದ ಅಂಬೇಡ್ಕರ್ ರಕ್ಷಣಾ ವೇದಿಕೆ ಶೀಟ್ ಅಳವಡಿಸಿ ತಾತ್ಕಾಲಿಕ ಮನೆಯೊಂದನ್ನು ನಿರ್ಮಾಣ ಮಾಡಿಕೊಟ್ಟಿದೆ.
ಸೂರು ಕಲ್ಪಿಸಿಕೊಟ್ಟು ನೆರವಿಗೆ ಬಂದ ಅಂಬೇಡ್ಕರ್ ರಕ್ಷಣಾ ವೇದಿಕೆ ಸದಸ್ಯರಿಗೆ ಬಾಲಕಿ ಮತ್ತವರ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.