ಪುತ್ತೂರು(ದಕ್ಷಿಣ ಕನ್ನಡ): ಮಹಿಳೆಯ ಹೆಸರಿನಲ್ಲಿರುವ ನಕಲಿ ಫೇಸ್ಬುಕ್ ಖಾತೆಯಿಂದ ನನಗೆ ಅಶ್ಲೀಲ ಮೆಸೇಜ್ಗಳು ಬಂದಿದ್ದು, ಇದೊಂದು ಹನಿಟ್ರ್ಯಾಪ್ ತಂಡದ ಕೃತ್ಯವಾಗಿರಬಹುದೆಂದು ಶಂಕಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ ಭಟ್ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![Ganaraja Bhatt](https://etvbharatimages.akamaized.net/etvbharat/prod-images/kn-mng-01-crimenews-puttur-script-kac10010_19052021194043_1905f_1621433443_429.jpg)
ಗಣರಾಜ್ ಭಟ್ಟರ ಫೇಸ್ಬುಕ್ ಖಾತೆಗೆ ಪ್ರೀತಾ ಶರ್ಮಾ ಎಂಬ ಹೆಸರಿನಲ್ಲಿ ರಿಕ್ವೆಸ್ಟ್ ಬಂದಿದ್ದು, ಅವರು ಮೆಸೆಂಜರ್ ಮೂಲಕ ಯಾರೆಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ 'ಪ್ರೀತಾ ಶರ್ಮಾ' ತಾನು ಮುಂಬೈಯವಳೆಂದು ಪರಿಚಯಿಸಿದ್ದು, ವಿಡಿಯೋ ಕಾಲ್ ಮಾಡಿ ಎಂಜಾಯ್ ಮಾಡುವ ಎಂದು ಕೇಳಿಕೊಂಡಿದ್ದಳು.
![hindu-jagarana-vedike-activsist-filed-case-against-fake-facebook-account](https://etvbharatimages.akamaized.net/etvbharat/prod-images/11821988_thu.jpg)
ಅಲ್ಲದೇ ವಾಟ್ಸಪ್ ನಂಬರ್ ಕೂಡಾ ಕೇಳಿದ್ದು, ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದಾಳೆ. ನೀವು ಬೆಡ್‌ರೂಂ ಅಥವಾ ಬಾತ್‌ರೂಂ ಗೆ ಹೋಗಿ ನಿಮ್ಮ 'ಅದನ್ನು' ತೋರಿಸಿ, ನಾನು ಈಗ ಲೈಂಗಿಕ ಮೂಡ್‌ನಲ್ಲಿ ಇದ್ದೇನೆ ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಳು. ಇದರಿಂದ ಸಂಶಯಗೊಂಡ ಗಣರಾಜ ಭಟ್ಟರು ಈ ಸಂಭಾಷಣೆಯ ಸ್ಕ್ರೀನ್ ಶಾಟ್ ತೆಗೆದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
![hindu-jagarana-vedike-activsist-filed-case-against-fake-facebook-account](https://etvbharatimages.akamaized.net/etvbharat/prod-images/11821988_thumm.jpg)
ಓದಿ: ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪ: ಸಿ.ಟಿ ರವಿ, ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಕೆ