ETV Bharat / state

ರಾತ್ರಿ ಬಸ್​ನಲ್ಲಿದ್ದ ಯುವಕ - ಯುವತಿ ತಡೆದ ಕಾರ್ಯಕರ್ತರು - couple from different communities

ಬಸ್​​ನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ಯುವಕ ಹಾಗೂ ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

hindu-activists-stop-couple-from-different-communities
ರಾತ್ರಿ ಬಸ್​ನಲ್ಲಿದ್ದ ಯುವಕ-ಯುವತಿ ತಡೆದ ಹಿಂದೂ ಕಾರ್ಯಕರ್ತರು
author img

By

Published : Dec 16, 2022, 10:23 AM IST

ಬಂಟ್ವಾಳ: ಸ್ಲೀಪರ್ ಬಸ್​​ನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ಅನ್ಯ ಸಮುದಾಯದ ಯುವಕ ಹಾಗೂ ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕದ ಸಮೀಪ ದಾಸಕೋಡಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಯುವಕನೊಂದಿಗೆ ಯುವತಿ ಪ್ರಯಾಣಿಸುತ್ತಿದ್ದಾಳೆ ಎಂಬ ಮಾಹಿತಿ ಹಿಂದೂ ಸಂಘಟನೆಯವರಿಗೆ ಸಿಕ್ಕಿತ್ತು. ಬಳಿಕ ದಾಸಕೋಡಿಯಲ್ಲಿ ಕಾರ್ಯಕರ್ತರು ಬಸ್ ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ಯುವತಿ ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬಳಿಕ ಬಂಟ್ವಾಳ ಪೊಲೀಸ್​​ ಠಾಣೆಯಲ್ಲಿ ಮಾತುಕತೆ ನಡೆಸಿ ಮನೆಯವರ ಜೊತೆ ಯುವತಿಯನ್ನು ಕಳುಹಿಸಲಾಗಿದೆ.

ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ.. ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.