ETV Bharat / state

ಮೃತದೇಹದ ಪತ್ತೆಗೆ ಸಹಕರಿಸಿ: ಕಡಬ ಪೊಲೀಸರಿಂದ ಮನವಿ - Kadaba

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಕೋಟೆ ಸಾರು ನದಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಮೃತರು ಯಾರು ಎಂಬುದು ಪತ್ತೆಯಾಗದ ಹಿನ್ನೆಲೆ ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

kadaba
ಕೋಟೆ ಸಾರು ನದಿಯಲ್ಲಿ ಪತ್ತೆಯಾದ ಮೃತದೇಹ
author img

By

Published : Feb 25, 2021, 11:45 AM IST

ಕಡಬ: ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಕೋಟೆ ಸಾರು ನದಿಯಲ್ಲಿ ಸುಮಾರು 65 ರಿಂದ 70 ವಯಸ್ಸಿನ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಶವ ಪತ್ತೆಯಾಗಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲಿ ಹಾಗೂ ಕೈಯಲ್ಲಿ ಕನ್ನಡಕ ಇರುವುದು ಕಂಡು ಬಂದಿತ್ತು. ಕೆಂಪು ಬಣ್ಣದ ರವಿಕೆ ಮತ್ತು ಬಿಳಿ ಸೀರೆ ತೊಟ್ಟಿದ್ದು, ಹಣೆಯಲ್ಲಿ ಕೆಂಪು ಬೊಟ್ಟು ಧರಿಸಿದ್ದಾರೆ. ಮೃತರು ಯಾರು ಎಂಬುದು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇವರ ಬಗ್ಗೆ ಮಾಹಿತಿ ಇರುವವರು ಕಡಬ ಪೊಲೀಸ್ ಠಾಣೆಯ 08251-260044 ನಂಬರ್​ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.