ಮಂಗಳೂರು : ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದ್ರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ನುಗ್ಗಿ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿರೋ ಘಟನೆ ಮಂಗಳೂರಿನ ಸೂರತ್ಕಲ್ ಬಳಿಯ ಚೊಕ್ಕಬೆಟ್ಟು ಕ್ರಾಸ್‌ನಲ್ಲಿ ನಡೆದಿದೆ.
ಸೂರತ್ಕಲ್ ಇದ್ಯಾ ಖಿಲ್ರಿಯಾ ಮಸೀದಿಯ ಅಧ್ಯಕ್ಷ ಮೊಯ್ದೀನ್ ಮೃತ ವ್ಯಕ್ತಿ. ಮೊಯ್ದೀನ್ ಅವರು ಸೂರತ್ಕಲ್ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಭಾನುವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ಚೊಕ್ಕಬೆಟ್ಟು ಕ್ರಾಸ್ ತಲುಪುತ್ತಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಈ ಸಂದರ್ಭ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಪಕ್ಕದ ಅಂಗಡಿಯೊಂದಕ್ಕೆ ನುಗ್ಗಿ ಕಾರಿನಲ್ಲಿದ್ದ ಮೊಯ್ದೀನ್ ಸಾವನ್ನಪ್ಪಿದ್ದಾರೆ. ಕಾರು ನಿಯಂತ್ರಣ ತಪ್ಪಿ ಚಲಾವಣೆಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.