ETV Bharat / state

ವಾಮಮಾರ್ಗದ ಮೂಲಕ ಬಿಜೆಪಿ ಗ್ರಾ.ಪಂ. ಚುನಾವಣೆ ಗೆಲ್ಲುವ ಹುನ್ನಾರ ನಡೆಸುತ್ತಿದೆ: ಹರೀಶ್ ಕುಮಾರ್

ವಾಮಮಾರ್ಗವನ್ನು ಅನುಸರಿಸಿ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವ ಹುನ್ನಾರ ನಡೆಸುತ್ತಿದೆ‌ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.

Harish Kumar
ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್
author img

By

Published : Dec 14, 2020, 4:00 PM IST

ಮಂಗಳೂರು: ವಾಮಮಾರ್ಗವನ್ನು ಅನುಸರಿಸಿ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವ ಹುನ್ನಾರ ನಡೆಸುತ್ತಿದೆ‌. ಚುನಾವಣೆಯಲ್ಲಿ ಶಾಸಕರು ಇಷ್ಟೊಂದು ಹಸ್ತಕ್ಷೇಪ ಮಾಡುವಂಥದ್ದು, ಪ್ರಥಮ ಬಾರಿಗೆ ಕಂಡು ಬರುತ್ತಿದೆ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಅಭ್ಯರ್ಥಿಗಳನ್ನು ಬೆದರಿಸುವಂಥದ್ದು, ಅಪಹರಿಸುವಂಥದ್ದು ಮಾಡಲಾಗುತ್ತಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹಣದ ಅಮಿಷವೊಡ್ಡಿ, ಚುನಾವಣಾ ಕಣದಿಂದ ಹೊರ ಬರುವಂತೆ ಮಾಡಲಾಗುತ್ತಿದೆ. ಈ ಎಲ್ಲಾ ವಿಚಾರವನ್ನು ನಾವು ಚುನಾವಣಾ ಆಯೋಗಕ್ಕೆ ತಿಳಿಸಲಿದ್ದೇವೆ. ಆದರೂ ಮತದಾರರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವನ್ನು ಹೊಂದಿದ್ದು, ಗ್ರಾಮಾಂತರ ಪ್ರದೇಶಗಳ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ‌ ಎಂದರು.

ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಮೀಸಲಾತಿಯನ್ನು ಬದಲಾವಣೆ ಮಾಡಿದೆ. ಪರಿಶಿಷ್ಟ ಜಾತಿ, ಪಂಗಡಗಳಿಲ್ಲದ ಮನೆಯೇ ಇಲ್ಲದ ಗ್ರಾಮಗಳಲ್ಲಿಯೂ ಮೀಸಲಾತಿ ನೀಡಿ ಸಾಮಾನ್ಯ ವರ್ಗದವರಿಗೆ ಚುನಾವಣಾ ಅಭ್ಯರ್ಥಿಗಳಾಗಲು ಅವಕಾಶ ನೀಡಿಲ್ಲ‌. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದಲ್ಲಿ‌ ಬದಲಾವಣೆ ಮಾಡಿ ಮೀಸಲಾತಿ ತಂದಿದ್ದಾರೆ ಎಂದು ಹರೀಶ್ ಕುಮಾರ್ ದೂರಿದರು.

ಅವೈಜ್ಞಾನಿಕವಾಗಿ ವಾರ್ಡ್​ಗಳನ್ನು ವಿಭಾಗ ಮಾಡಲಾಗಿದೆ. ಇದರಿಂದ ಒಂದು ಕ್ಷೇತ್ರದ ಮತದಾರರು ಮತ ಚಲಾಯಿಸಲು ಎರಡು ಕ್ಷೇತ್ರಗಳನ್ನು ದಾಟಿ ಚುನಾವಣಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಒಂದು ವಾರ್ಡ್​ನಲ್ಲಿ 10 ಮನೆಗಳಿದ್ದರೆ, ಐದೈದು ಮನೆಗಳಿಗೆ ಬೇರೆ ಬೇರೆ ಚುನಾವಣಾ ಕೇಂದ್ರಗಳಲ್ಲಿ ಮತ ಚಲಾಯಿಸಬೇಕಾಗುತ್ತದೆ ಎಂದರು.

ದ.ಕ.ಜಿಲ್ಲೆಯ 288 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, 2,988 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಕಾಂಗ್ರೆಸ್ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ಹಂತದ ನಾಮಪತ್ರಗಳು ಈಗಾಗಲೇ ಸಲ್ಲಿಕೆಯಾಗಿವೆ. ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.