ETV Bharat / state

ಕುದ್ರೋಳಿಯಲ್ಲಿ ಗೂಡು ದೀಪ ಸ್ಪರ್ಧೆ... ಮಂಗಳೂರಿಗರು ಫಿದಾ - 250ಕ್ಕೂ ಅಧಿಕ ಗೂಡುದೀಪಗಳು

ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಮನೆಯ ಮುಂಭಾಗ ಇರಿಸಲು ಗೂಡು ದೀಪಗಳನ್ನು ಮನೆಯಲ್ಲೇ ಮಾಡಲಾಗುತ್ತಿತ್ತು. ಆದರೆ, ಈ ಆಧುನಿಕ ಯುಗದಲ್ಲಿ ಯಾರೂ ಗೂಡು ದೀಪಗಳನ್ನು ಮಾಡುತ್ತಿಲ್ಲ. ಆದ್ದರಿಂದ ಈ ಕಲೆಯನ್ನು ಇನ್ನೂ ಮುಂದುವರೆಸುತ್ತಿರುವ ಕಲಾವಿದರನ್ನು ಹುಡುಕಲು ಮಂಗಳೂರಿನರಿನಲ್ಲಿ ಗೂಡು ದೀಪ ರಚನೆ ಸ್ಪರ್ಧೆ ನಡೆಸಲಾಯಿತು.

ಮಂಗಳೂರಿಗರು
author img

By

Published : Oct 27, 2019, 10:49 AM IST

ಮಂಗಳೂರು: ಜಿಲ್ಲೆಯ ಕುದ್ರೋಳಿ ಶ್ರೀ ‌ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 250ಕ್ಕೂ ಅಧಿಕ ಗೂಡು ದೀಪಗಳು ಸ್ಪರ್ಧೆಯಲ್ಲಿ ನೋಡುಗರ ಕಣ್ಮನ ಸೆಳೆದವು.

ಸಾಂಪ್ರದಾಯಿಕ ಹಾಗೂ ಆಧುನಿಕ ಎರಡೂ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಜನರು ಈ ವಿಭಿನ್ನ ಮಾದರಿಯ ಗೂಡು ದೀಪಗಳನ್ನು ಕಂಡು ಫುಲ್ ಫಿದಾ ಆದರು. ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಅರಳಿದ ಅಡಿಕೆ ಹಾಳೆ, ಬೆಂಕಿ ಕಡ್ಡಿ, ತೆಂಗಿನ ಗರಿ, ಹಗ್ಗ, ಕ್ರೆಯಾನ್ಸ್, ನೂಲಿನ ಹೊಲಿಗೆ, ಬಣ್ಣದ ಕಾಗದ, ಹಿಡಿಸೂಡಿ ಕಡ್ಡಿ, ಯಕ್ಷಗಾನ ಮಾದರಿಯ ಗೂಡು ದೀಪಗಳು ಜನಾಕರ್ಷಣೆಗೆ ಒಳಗಾದವು.

ಮಂಗಳೂರಿನರಿನಲ್ಲಿ ಗೂಡು ದೀಪ ರಚನೆ ಸ್ಪರ್ಧೆ

ಇಲ್ಲಿನ ಹೆಚ್ಚಿನ ಗೂಡು ದೀಪಗಳು ಬಹಳ ಕಾಲದ ಪರಿಶ್ರಮದಿಂದ ರಚನೆಗೊಂಡಿವೆ. ಅಡಿಕೆ ಹಾಳೆಯ ಗೂಡು ದೀಪ ಎಂಟು ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡರೆ, ಬೆಂಕಿ ಕಡ್ಡಿಯ ಗೂಡುದೀಪ ಒಂದೂವರೆ ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಯಕ್ಷಗಾನ ಮಾದರಿಯ ಬಣ್ಣ ಕಾಗದದ ಗೂಡು ದೀಪ ನಿರ್ಮಾಣಕ್ಕೆ ಎರಡು ವಾರಗಳ ಪರಿಶ್ರಮ ಇದೆ. ಕಲಾವಿದನ ತಾಳ್ಮೆ, ಪರಿಶ್ರಮದಿಂದ ಮೂಡಿ ಬಂದ ಅನೇಕ ರೀತಿಯ ಗೂಡು ದೀಪಗಳು ಸ್ಪರ್ಧೆಗೆ ಬಂದಿದ್ದವು. ಗೂಡು ದೀಪಗಳನ್ನು ರಚನೆ ಮಾಡಲು ವೇದಿಕೆ ನಿರ್ಮಾಣವಾಗಿರುವುದರಿಂದ ಯಾವ ಅಂಗಡಿ ಮಳಿಗೆಗಳಲ್ಲೂ ದೊರೆಯದ ಹಲವಾರು ಮಾದರಿಯ, ವಿಭಿನ್ನ ಶೈಲಿಯ ಗೂಡು ದೀಪಗಳನ್ನು ನೋಡಿ ಜನ ಸಂತೋಷ ಪಟ್ಟರು.

Intro:Special Package

ಮಂಗಳೂರು: ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಮನೆಯ ಮುಂಭಾಗ ಇರಿಸಲು ಗೂಡುದೀಪಗಳನ್ನು ಮನೆಯಲ್ಲೇ ಮಾಡಲಾಗುತ್ತಿತ್ತು. ಆದರೆ ಕಾಲದ ವೇಗದ ಈ ಆಧುನಿಕ ಯುಗದಲ್ಲಿ ಯಾರಿಗೂ ಗೂಡುದೀಪಗಳನ್ನು ಮಾಡಲು ಸಮಯವಿಲ್ಲ‌. ಆದ್ದರಿಂದ ಅಂಗಡಿ ಮಳಿಗೆಗಳಲ್ಲಿ ಸಿಗುವ ಸಿದ್ಧ ಮಾದರಿಯ ಗೂಡುದೀಪಗಳನ್ನೇ ಎಲ್ಲರೂ ಖರೀದಿಸುತ್ತಾರೆ. ಆದರೆ ಜನಸಾಮಾನ್ಯರೊಳಗಿನ ಕಲಾವಿದರನ್ನು ಹುಡುಕಾಡಲು ಗೂಡುದೀಪ ರಚನೆ ಸ್ಪರ್ಧೆ ಮಂಗಳೂರಿನ ಕುದ್ರೋಳಿ ಶ್ರೀ ‌ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು.

ಸುಮಾರು 250ಕ್ಕೂ ಅಧಿಕ ವಿವಿಧ ರೀತಿಯ ಗೂಡುದೀಪಗಳು ಈ ಸ್ಪರ್ಧೆಯಲ್ಲಿತ್ತು. ಸಾಂಪ್ರದಾಯಿಕ ಹಾಗೂ ಆಧುನಿಕ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಜನರು ಈ ವಿಭಿನ್ನ ಮಾದರಿಯ ಗೂಡುದೀಪಗಳನ್ನು ಕಂಡು ಫುಲ್ ಫಿದಾ ಆದರು. ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಅರಳಿದ ಅಡಿಕೆ ಹಾಳೆ, ಬೆಂಕಿ ಕಡ್ಡಿ, ತೆಂಗಿನ ಗರಿ, ಹಗ್ಗ, ಕ್ರೆಯಾನ್ಸ್, ನೂಲಿನ ಹೊಲಿಗೆ, ಬಣ್ಣ ಕಾಗದ, ಹಿಡಿಸೂಡಿ ಕಡ್ಡಿ, ಯಕ್ಷಗಾನ ಮಾದರಿಯ ಗೂಡುದೀಪಗಳು ಜನಾಕರ್ಷಣೆಗೆ ಒಳಗಾಯಿತು.

Body:ಇಲ್ಲಿನ ಹೆಚ್ಚಿನ ಗೂಡುದೀಪಗಳು ಬಹಳ ಕಾಲದ ಪರಿಶ್ರಮದಿಂದ ರಚನೆಗೊಂಡಿವೆ. ಅಡಿಕೆ ಹಾಳೆಯ ಗೂಡು ದೀಪ ಎಂಟು ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡರೆ, ಬೆಂಕಿಕಡ್ಡಿಯ ಗೂಡುದೀಪ ಒಂದುವರೆ ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಯಕ್ಷಗಾನ ಮಾದರಿಯ ಬಣ್ಣ ಕಾಗದದ ಗೂಡುದೀಪ ನಿರ್ಮಾಣಕ್ಕೆ ಎರಡು ವಾರಗಳ ಪರಿಶ್ರಮ ಇದೆ. ಈ ರೀತಿಯಲ್ಲಿ ಕಲಾವಿದನ ತಾಳ್ಮೆ, ಪರಿಶ್ರಮದಿಂದ ಮೂಡಿ ಬಂದ ಅನೇಕ ರೀತಿಯ ಗೂಡುದೀಪಗಳು ಸ್ಪರ್ಧೆಗೆ ಬಂದಿತ್ತು. ಒಟ್ಟಿನಲ್ಲಿ ಗೂಡುದೀಪಗಳನ್ನು ರಚನೆ ಮಾಡಲು ವೇದಿಕೆ ನಿರ್ಮಾಣವಾಗಿರುವುದರಿಂದ ಯಾವ ಅಂಗಡಿ ಮಳಿಗೆಗಳಲ್ಲೂ ದೊರಕದ ಹಲವಾರು ಮಾದರಿಯ, ವಿಭಿನ್ನ ಶೈಲಿಯ ಗೂಡುದೀಪಗಳು ಜನರಿಗೆ ನೋಡಲು ದೊರಕಿತು.

ಬೈಟ್ ನೀಡಿದವರು ಮಂಗಳೂರಿನ ಕಾರ್ ಸ್ಟ್ರೀಟ್ ನ ವಿಠ್ಠಲ್ ಭಟ್

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.