ETV Bharat / state

ಬೆಳಗ್ಗೆ ಬಿಜೆಪಿ, ಸಂಜೆ ಕಾಂಗ್ರೆಸ್: ಬಂಟ್ವಾಳದಲ್ಲಿ ಹೀಗೊಂದು ಪಕ್ಷಾಂತರ ಪರ್ವ! - ಬಿಜೆಪಿ ಸೇರಿದ ಬಂಟ್ವಾಳ ಕಾಂಗ್ರೆಸ್​ ಸದಸ್ಯೆ

ಬೆಳಗ್ಗೆ ಬಿಜೆಪಿ ಸೇರಿದ ಬಂಟ್ವಾಳದ ಕಾಂಗ್ರೆಸ್​ ಬೆಂಬಲಿತ ಗ್ರಾಪಂ ಸದಸ್ಯೆಯೋರ್ವರು ಸಂಜೆ ಮತ್ತೆ ಕಾಂಗ್ರೆಸ್​ಗೆ ಮರಳಿ ಸುದ್ದಿಯಾಗಿದ್ದಾರೆ.

GP member Joined BJP and returned to Congress
ಬಂಟ್ವಾಳದಲ್ಲಿ ಹೀಗೊಂದು ಪಕ್ಷಾಂತರ ಪರ್ವ..!
author img

By

Published : Feb 7, 2021, 9:45 PM IST

ಬಂಟ್ವಾಳ: ಬೆಳಗ್ಗೆ ಬಿಜೆಪಿ ಸೇರಿದ್ದ ವೀರಕಂಭದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ಲಲಿತಾ ಸಂಜೆಯಾಗುತ್ತಿದ್ದಂತೆ ಮತ್ತೆ ಕಾಂಗ್ರೆಸ್​ಗೆ​ ಮರಳಿದ್ದಾರೆ.

ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಯಾಗಿದ್ದ ಲಲಿತಾ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಸಂದರ್ಭ ಬಿಜೆಪಿ ಬೆಂಬಲಿತರಿಗೆ ವೀರಕಂಭ ಗ್ರಾಪಂ ಅಧಿಕಾರ ದೊರಕಲಿದೆ ಎಂದು ಬಿಜೆಪಿ ಕ್ಷೇತ್ರ ಪದಾಧಿಕಾರಿಗಳು ಸಂಭ್ರಮಿಸಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದರು.

ಆದರೆ ಸಂಜೆ ಮಾಜಿ ಸಚಿವ ಬಿ.ರಮಾನಾಥ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತಿತರರ ಸಮ್ಮುಖದಲ್ಲಿ ಲಲಿತಾ ಕಾಂಗ್ರೆಸ್ ಧ್ವಜ ಹಾಗೂ ಕಾಂಗ್ರೆಸ್ ಶಾಲು ಹಾಕಿಕೊಂಡು ನಿಂತ ಫೋಟೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಓದಿ : ಇಲ್ಲಿ ಸೋತವರು, ಗೆದ್ದವರು ಎಲ್ಲರೂ ನಮ್ಮವರೇ: ನಲಪಾಡ್

ಈ ಕುರಿತು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಲಲಿತಾ ಅವರು ಕಾರ್ಯಕ್ರಮವೊಂದಕ್ಕೆ ಹೊರಟಿದ್ದಾಗ ಅವರನ್ನು ಬಿಜೆಪಿ ಕಚೇರಿಗೆ ಕರೆತಂದು ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಅವರಿಗೆ ವಿಷಯವೇನೆಂದು ಅರಿವಾಗುವಾಗ ಬಿಜೆಪಿ ಧ್ವಜ ಹಿಡಿದಾಗಿತ್ತು. ಇದೀಗ ಮತ್ತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ. ಅವರಾಗಿಯೇ ಪಕ್ಷ ತ್ಯಜಿಸಿ ಹೋಗುವುದಾದರೆ ವಿಚಾರ ಬೇರೆ. ಆದರೆ ದಾರಿ ತಪ್ಪಿಸಿ ಸೇರ್ಪಡೆಗೊಳಿಸುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.