ಮಂಗಳೂರು: ಟ್ರಾಲಿ ಬ್ಯಾಗ್ ನ ಚಕ್ರ ಮತ್ತು ಆಟಿಕೆಯ ಮೋಟಾರ್ ಪ್ಲೇಟ್ ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ದುಬೈನಿಂದ ಮಂಗಳೂರಿಗೆ ಶುಕ್ರವಾರ ಬಂದ ಕಾಸರಗೋಡಿನ ಶೇಕ್ ಹನೀಫ್ (26) ಎಂಬಾತ ಈ ರೀತಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿರುವ ಆರೋಪಿ. ಈತನನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಟ್ರಾಲಿ ಬ್ಯಾಗ್ನ ಚಕ್ರದಲ್ಲಿ ಮತ್ತು ವ್ಯಾಕ್ಯುಮ್ ಕ್ಲೀನರ್ ಆಟಿಕೆಯ ಮೋಟಾರ್ ಪ್ಲೇಟ್ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈತನಿಂದ ರೂ 19,01,460 ಮೌಲ್ಯದ 402 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈತನನ್ನು ಬಂಧಿಸಿರುವ ಮಂಗಳೂರು ಕಸ್ಟಮ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:12ನೇ ದಿನವೂ ಇಂಧನ ಬೆಲೆ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ ದರ ಎಷ್ಟು ಗೊತ್ತೆ?