ETV Bharat / state

ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಯುವತಿ ಆತ್ಮಹತ್ಯೆ - girl commits suicide in bantwal

ಬಂಟ್ವಾಳದ ನೆತ್ರಕೆರೆ ನಿವಾಸಿಯಾದ 22ವರ್ಷದ ಯುವತಿ ಡೆತ್ ನೋಟ್ ಬರೆದಿಟ್ಟು ದೇವಸ್ಥಾನ ಸಮೀಪ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

girl commits suicide by jumping into river
ಯುವತಿ ಆತ್ಮಹತ್ಯೆ
author img

By

Published : Oct 11, 2021, 8:08 PM IST

ಬಂಟ್ವಾಳ: ವಿಟ್ಲ ದೇವಸ್ಥಾನ ಸಮೀಪ ಕೆರೆಯೊಂದಕ್ಕೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯ ನೆತ್ರಕೆರೆ ನಿವಾಸಿ ನಿಶ್ಮಿತಾ (22) ಸಾವನ್ನಪ್ಪಿದವರು.

ಈಕೆ ಡೆತ್ ನೋಟ್ ಮತ್ತು ಮೊಬೈಲ್ ಅನ್ನು ಕೆರೆ ಬದಿಯಲ್ಲಿಟ್ಟು ಸಾವನ್ನಪ್ಪಿದ್ದಾಗಿ ಹೇಳಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಮಿತಾ ಸ್ಥಳೀಯ ಡೆಂಟಲ್ ಕ್ಲಿನಿಕ್ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆಯಿಂದ ಕಾಣೆಯಾಗಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅ.11ರಂದು ಮುಂಜಾನೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಡೆತ್ ನೋಟ್ ಮತ್ತು ಮೊಬೈಲ್ ಕೂಡ ಮೃತದೇಹ ದೊರೆತ ಸ್ಥಳದಲ್ಲಿ ಪತ್ತೆಯಾಗಿದೆ. ಡೆತ್​​ನೋಟ್​​ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.