ಮಂಗಳೂರು; ನಗರದಲ್ಲಿ ರಾತ್ರಿ ವೇಳೆಗೆ ಗ್ಯಾಸ್ ಲೀಕ್ ಆದ ವಾಸನೆ ಹರಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ನಗರದ ಕಾರ್ ಸ್ಟ್ರೀಟ್, ಹಂಪನಕಟ್ಟೆ, ಪಾಂಡೇಶ್ವರ, ಕುದ್ರೋಳಿ, ಕೊಟ್ಟಾರ , ಮಂದಾರಬೈಲ್, ಕೊಂಚಾಡಿ, ಕದ್ರಿ, ಬಿಜೈ ಮೊದಲಾದೆಡೆಗಳಲ್ಲಿ ಗ್ಯಾಸ್ ಲೀಕ್ ಆದ ವಾಸನೆ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಓದಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ
ರಾತ್ರಿ 10 ಗಂಟೆ ಸುಮಾರಿಗೆ ಗ್ಯಾಸ್ ಲೀಕ್ ಆದ ವಾಸನೆ ಹರಡಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಲವೆಡೆಗಳಲ್ಲಿ ಜನರು ತಮ್ಮ ಮನೆಯಲ್ಲಿ ಗ್ಯಾಸ್ ಲೀಕ್ ಆಗಿದೆಯೆ ಎಂದು ಪರಿಶೀಲಿಸಿದ್ದಾರೆ. ನಗರದಲ್ಲಿ ಏಕಾಏಕಿ ಗ್ಯಾಸ್ ಲೀಕ್ ವಾಸನೆ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.