ETV Bharat / state

ಕಾಳಜಿ ರಿಲೀಫ್ ಫಂಡ್​ ಲೆಕ್ಕಾಚಾರ ಪಾರದರ್ಶಕವಾಗಿದೆ: ಸಮಿತಿಯ ಸ್ಪಷ್ಟನೆ - Money collected

ಕಾಳಜಿ ರಿಲೀಫ್​ ಫಂಡ್​ ಸಮಿತಿಯಲ್ಲಿ ಸಂಗ್ರಹವಾದ ದೇಣಿಗೆ ಹಣ ಆಯಾ ಬ್ಯಾಂಕ್​ ಖಾತೆಯಲ್ಲಿದೆ. ಈ ಹಣವನ್ನು ಯಾರೂ ಯಾವುದೇ ಕಾರಣಕ್ಕೂ ಬಳಸಿಕೊಂಡಿಲ್ಲ. ಮಾಜಿ ಶಾಸಕ ವಸಂತ ಬಂಗೇರ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಮಿತಿ ಮುಖಂಡರೊಬ್ಬರು ಸ್ಪಷ್ಟಪಡಿಸಿದರು.

Clarification from committee
ಕಾಳಜಿ ರಿಲೀಫ್ ಫಂಡ್ ಸಮಿತಿಯ ಸ್ಪಷ್ಟನೆ
author img

By

Published : Aug 26, 2020, 8:55 PM IST

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ವರ್ಷವೂ ನೆರೆಹಾವಳಿ ಸಂಭವಿಸಿತ್ತು. ಆಗ ಹಾನಿಗೊಳಗಾದ ಸಂತ್ರಸ್ತರಿಗೆ ಸಂಗ್ರಹಿಸಲಾಗಿದ್ದ ಹಣ ಆಯಾ ಬ್ಯಾಂಕ್​ ಖಾತೆಯಲ್ಲಿ ಭದ್ರವಾಗಿದೆ. ಈ ಹಣವು ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ನೀಡುವ ದಾಖಲೆ ಪ್ರಕಾರ ಸಂತ್ರಸ್ತರ ಕೈ ಸೇರಲಿದೆ ಎಂದು ಕಾಳಜಿ ರೀಲಿಫ್ ಫಂಡ್​ನ ಕಾರ್ಯದರ್ಶಿ ವಕೀಲ ಧನಂಜಯ ರಾವ್ ಧರ್ಪಿಂಜ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸಂಭವಿಸಿದ ನೆರೆ ಹಾವಳಿಯಿಂದ ಅನೇಕ ಜನರು ಮನೆ ಕಳೆದುಕೊಂಡಿದ್ದಾರೆ. ಅವರ ಏಳ್ಗೆಗಾಗಿ ಕಾಳಜಿ ರಿಲೀಫ್​ ಫಂಡ್​ ಸಮಿತಿಗೆ ಸಾವಿರಾರು ದಾನಿಗಳು ಹಣ ನೀಡಿದ್ದಾರೆ. ಎಲ್ಲ ವ್ಯವಹಾರ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಶಾಸಕರ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಎಲ್ಲ ಕಡೆಯಿಂದಲೂ ದಾನಿಗಳು ದೇಣಿಗೆ ನೀಡಿದ್ದಾರೆ.

ಕಾಳಜಿ ರಿಲೀಫ್ ಫಂಡ್ ಸಮಿತಿಯ ಸ್ಪಷ್ಟನೆ

ಅದರ ಲೆಕ್ಕಾಚಾರವೂ ಸರಿಯಾಗಿದೆ. ಆ ಹಣ ದುರುಪಯೋಗವಾಗಿಲ್ಲ. ಮಾಜಿ ಶಾಸಕ ವಸಂತ ಬಂಗೇರ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಇದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಫಂಡ್ ಹೆಸರಿನಲ್ಲಿ ಸಂಗ್ರಹವಾದ ಹಣ ದುರುಪಯೋಗ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.