ETV Bharat / state

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದ ಮಾಜಿ ಸಚಿವ ಖಾದರ್ - ಆಸ್ಪತ್ರೆಗೆ ಸೇರಿಸಿದ ಮಾಜಿ ಸಚಿವ ಖಾದರ್

ಮಾಜಿ ಸಚಿವ ಯು ಟಿ ಖಾದರ್ ಅವರು ನಿನ್ನೆ ರಾತ್ರಿ ಪುತ್ತೂರಿನಲ್ಲಿ ಕಾರ್ಯಕ್ರಮ ಮುಗಿಸಿ ಉಳ್ಳಾಲಕ್ಕೆ ಬರುತ್ತಿದ್ದ ವೇಳೆ ಕೊಣಾಜೆ ಸಮೀಪದ ಕಂಬಳ ಪದವು ಎಂಬಲ್ಲಿ ರಿಕ್ಷಾವೊಂದು ಪಲ್ಟಿಯಾಗಿರುವುದನ್ನು ಗಮನಿಸಿದ್ದರು..

UT Khader
ಮಾಜಿ ಸಚಿವ ಖಾದರ್
author img

By

Published : Jan 12, 2021, 11:54 AM IST

ಮಂಗಳೂರು : ಮಂಗಳೂರು ತಾಲೂಕಿನ ಕೊಣಾಜೆಯ ಕಂಬಳ ಪದವು ಎಂಬಲ್ಲಿ ರಿಕ್ಷಾವೊಂದು ಅಪಘಾತಕ್ಕೀಡಾಗಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಮಾಜಿ ಸಚಿವ ಯು ಟಿ ಖಾದರ್ ಅವರು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಜಿ ಸಚಿವ ಯು ಟಿ ಖಾದರ್ ಅವರು ನಿನ್ನೆ ರಾತ್ರಿ ಪುತ್ತೂರಿನಲ್ಲಿ ಕಾರ್ಯಕ್ರಮ ಮುಗಿಸಿ ಉಳ್ಳಾಲಕ್ಕೆ ಬರುತ್ತಿದ್ದ ವೇಳೆ ಕೊಣಾಜೆ ಸಮೀಪದ ಕಂಬಳ ಪದವು ಎಂಬಲ್ಲಿ ರಿಕ್ಷಾವೊಂದು ಪಲ್ಟಿಯಾಗಿರುವುದನ್ನು ಗಮನಿಸಿದ್ದರು. ಕಾರ್ಯಕ್ರಮ ಮುಗಿಸಿದ ಯುವಕರ ತಂಡವೊಂದು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆ ಕಂಬಳಪದವಿನಲ್ಲಿ ರಿಕ್ಷಾ ಪಲ್ಟಿಯಾಗಿ ಐವರು ಗಾಯಗೊಂಡಿದ್ದರು.

ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿದ ಮಾಜಿ ಸಚಿವ

ಇದನ್ನೂ ಓದಿ: 'ಇನ್ನೊಮ್ಮೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದರೆ ನಾಲಿಗೆ ಕಿತ್ತು ಹಾಕುತ್ತೇವೆ'

ಇನ್ನು, ಅಪಘಾತದಲ್ಲಿ ಗಾಯಗೊಂಡವರನ್ನು ಗಮನಿಸಿದ ಖಾದರ್ ಅವರು, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ತಮ್ಮ ಕಾರಿನಲ್ಲಿಯೇ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.