ETV Bharat / state

ಗೋಶಾಲೆ ಧ್ವಂಸ: 1 ಲಕ್ಷ ರೂ. ಸಹಾಯ ಮಾಡಿದ ಮಾಜಿ ಶಾಸಕ

author img

By

Published : Mar 20, 2021, 5:24 PM IST

Updated : Mar 20, 2021, 5:47 PM IST

ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಒಂದು ಲಕ್ಷ ರೂ. ನೀಡಿದ್ದೇನೆ. ವಿಧಾನಪರಿಷತ್ ಸದಸ್ಯರಾಗಿರುವ ನನ್ನ ಸಹೋದರ ಬಿ. ಎಂ ಫಾರೂಕ್ ಅವರಲ್ಲಿ ಶಾಸಕರ ನಿಧಿಯಿಂದ ಹಣ ನೀಡುವಂತೆ ವಿನಂತಿಸಿದ್ದು, ಶಾಸ್ವತ ಗೋಶಾಲೆಗೆ 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್​ ಬಾವ ಹೇಳಿದರು.

ಗೋಶಾಲೆ

ಮಂಗಳೂರು: ಕೋಸ್ಟ್ ಗಾರ್ಡ್​ಗೆ ನೀಡಲಾದ ಜಾಗದಲ್ಲಿದ್ದ ಗೋಶಾಲೆಯನ್ನು ಇತ್ತೀಚಿಗೆ ಧ್ವಂಸ ಮಾಡಿದ ಹಿನ್ನೆಲೆ, ಗೋವುಗಳಿಗೆ ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಮಾಜಿ ಶಾಸಕ ಮೊಯಿದ್ದೀನ್​ ಬಾವ ಒಂದು ಲಕ್ಷ ರೂ. ಚೆಕ್ ವಿತರಿಸಿದರು.

ಬಜ್ಪೆ ಕೆಂಜಾರಿನಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಸುಮಾರು 300 ಕಪಿಲ ತಳಿಯ ಗೋವುಗಳನ್ನು ಸಾಕುತ್ತಿದ್ದು, ಈ ಗೋಶಾಲೆ ಧ್ವಂಸ ಮಾಡಲಾಗಿತ್ತು. ಇತ್ತೀಚಿಗೆ ಮಾಜಿ ಶಾಸಕ ಮೊಯಿದ್ದೀನ್​ ಬಾವ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದರು. ಇಂದು ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಒಂದು ಲಕ್ಷ ರೂ. ಚೆಕ್ ಅನ್ನು ಪ್ರಕಾಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್​ ಬಾವ

ಈ ವೇಳೆ ಮಾತನಾಡಿದ ಅವರು, ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕೆ ಒಂದು ಲಕ್ಷ ರೂ. ನೀಡಿದ್ದೇನೆ. ವಿಧಾನಪರಿಷತ್ ಸದಸ್ಯರಾಗಿರುವ ನನ್ನ ಸಹೋದರ ಬಿ. ಎಂ ಫಾರೂಕ್ ಅವರಲ್ಲಿ ಶಾಸಕರ ನಿಧಿಯಿಂದ ಹಣ ನೀಡುವಂತೆ ವಿನಂತಿಸಿದ್ದು, ಶಾಶ್ವತ ಗೋಶಾಲೆಗೆ 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ.. ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹಿಂದೂ ಪತ್ರಕರ್ತನ ಹತ್ಯೆ: ಅಪರಿಚಿತರಿಂದ ಕೃತ್ಯ

Last Updated : Mar 20, 2021, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.