ETV Bharat / state

ಕೋವಿಡ್ ನಿಗ್ರಹಕ್ಕೆ ಕಾಸರಗೋಡು-ದ.ಕ. ಜಿಲ್ಲಾಡಳಿತದ ಸಭೆ ಕರೆಯಲಿ: ಯು.ಟಿ.ಖಾದರ್ - UT Khader

ಕೇರಳ ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಪ್ರಮಾಣ ಹೆಚ್ಚಿದ ಹಿನ್ನಲೆ ಕಾಸರಗೋಡು-ದ.ಕ.ಜಿಲ್ಲಾಡಳಿತ ಸಭೆ ಕರೆದು ಕೋವಿಡ್ ನಿಗ್ರಹದ ಬಗ್ಗೆ ಚರ್ಚೆ ನಡೆಸಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಯು.ಟಿ.ಖಾದರ್
UT Khader
author img

By

Published : Feb 22, 2021, 1:49 PM IST

ಮಂಗಳೂರು: ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ದ‌.ಕ. ಜಿಲ್ಲಾ ಉಸ್ತುವಾರಿ ಸಚಿವರು ಕಾಸರಗೋಡು ಹಾಗೂ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ಕರೆದು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದರು.

ಮಾಜಿ ಸಚಿವ ಯು.ಟಿ.ಖಾದರ್

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಹಂತದ ಲಸಿಕಾ ಅಭಿಯಾನದ ಬಗ್ಗೆ ಯಾವುದೇ ಮಾಹಿತಿ ಸರ್ಕಾರ ನೀಡಿಲ್ಲ. ಆದರೆ ಮೊದಲನೆಯದಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಬಿಪಿ, ಶುಗರ್ ನಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಕಾರ್ಯವಾಗಲಿ. ಅಲ್ಲದೆ ರ್ಯಾಂಡಮ್ ತಪಾಸಣೆ ಜೊತೆಗೆ ಟ್ರೇಸಿಂಗ್ ಕೂಡ ಮಾಡಬೇಕು ಎಂದು ಹೇಳಿದರು.

ತಮ್ಮ ಸಹೋದರನ ಮನೆಗೆ ಐಟಿ ಇಲಾಖೆ ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಐಟಿ ಇಲಾಖೆಯವರು ಪ್ರಾಮಾಣಿಕವಾಗಿ ಅವರ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ಸಹಕಾರ ನೀಡುತ್ತಿದ್ದೇವೆ. ನನ್ನ ಸಹೋದರ ಬಹಳಷ್ಟು ವರ್ಷಗಳಿಂದ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಪರ್ಕದಲ್ಲಿದ್ದಾರೆ.‌ ಈ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಐಟಿಯವರು ದಾಳಿ ನಡೆಸಿದ್ದಾರೆ.

ಐಟಿಗೆ ಮಾಹಿತಿ ಇರುವ ಕಾರಣ ತನಿಖೆ ನಡೆಸುತ್ತಿದ್ದಾರೆ. ಇದರಿಂದ ಸತ್ಯವಿಚಾರ ಐಟಿಯವರಿಗೆ ಮಾತ್ರವಲ್ಲ, ಜನರಿಗೂ ತಿಳಿಯುತ್ತದೆ. ನಮ್ಮಲ್ಲಿನ ಎಲ್ಲಾ ವೈದ್ಯಕೀಯ ಕಾಲೇಜುಗಳ ಆಡಳಿತ ಸಂಸ್ಥೆಯವರಲ್ಲಿ ಬೇಕಾದಷ್ಟು ಹಣವಿದೆ. ನಾವು ಕೊಡಬೇಕೆಂದೇನೂ ಇಲ್ಲ. ಅಲ್ಲದೆ ಅವರೊಂದಿಗೆ ಪಾಲುದಾರರಾಗುವಷ್ಟು ನಮ್ಮಲ್ಲಿ ಹಣವೂ ಇಲ್ಲ. ಐಟಿ ದಾಳಿ ನಡೆಸುವಾಗ ನನ್ನ ಸಹೋದರ ಬಹರೈನ್ ಗೆ ತೆರಳಿದ್ದರು. ಅಲ್ಲಿ ಕ್ವಾರಂಟೈನ್ ಇತ್ತು, ಹಾಗಾಗಿ ಬರುವಾಗ ಸ್ವಲ್ಪ ತಡವಾಗಿದೆ. ಈಗ ಬಂದು‌ ಐಟಿ ಇಲಾಖೆಯವರ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ ಎಂದು ಖಾದರ್ ಹೇಳಿದರು.

ರಾಮ ಮಂದಿರಕ್ಕೆ ದೇಣಿಗೆ ಕೇಳಲು ಯಾರಾದರೂ ತಮ್ಮ ಮನೆಗೆ ಬಂದಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಮನೆಗೆ ಯಾರೂ ದೇಣಿಗೆ ಕೇಳಲು ಬಂದಿಲ್ಲ. ಯಾರಾದರೂ ಬಂದಲ್ಲಿ ಅಂದು ದೇಣಿಗೆ ಕೊಡುವ ಬಗ್ಗೆ ನಿರ್ಧರಿಸುವೆ. ನಮ್ಮ ಯಾವುದೇ ಕಾರ್ಯಯೋಜನೆಗಳ ಮೂಲಕ ಒಗ್ಗಟಿನ ಭಾರತವನ್ನು ಮುಂದಿನ ಪೀಳಿಗೆಯನ್ನು ಕೊಡುಗೆಯಾಗಿ ನೀಡಬೇಕು. ಅಯೋಧ್ಯೆಯ ವಿಚಾರದಲ್ಲಿ ನಾವು ಸಮಸ್ಯೆಗಳಿಂದ ಇದ್ದೆವು. ಇಷ್ಟು ವರ್ಷಗಳ ವೈಮನಸ್ಸೇ ಇತ್ತು. ಇನ್ನು ಮುಂದಕ್ಕಾದರೂ ಇದು ಸರಿಯಾಗಲಿ ಎಂದು ಹೇಳಿದರು.

ಪಿಎಫ್ಐ ಸಂಘಟನೆಗೆ ಮಾರ್ಚ್​ಗೆ ಅವಕಾಶ ಇಲ್ಲದಿದ್ದರೂ ಉಳ್ಳಾಲದಲ್ಲಿ ಮಾರ್ಚ್ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಎಲ್ಲ ಪಕ್ಷದವರಿಗೂ ಅವರದ್ದೇ ಆದ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಸರಕಾರ ಕಾರ್ಯಕ್ರಮ ನಡೆಸಲು ಪರವಾನಿಗೆ ನೀಡಬೇಕು. ಇದರ ಬಗ್ಗೆ ಸರಕಾರ ಸರಿಯಾದ ನಿರ್ಧಾರ ಕೈಗೊಳ್ಳಬೇಕಿತ್ತು. ಆದ್ದರಿಂದ ಮುಂದಕ್ಕೆ ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.