ETV Bharat / state

ಉಳ್ಳಾಲ ವ್ಯಾಪ್ತಿಯಲ್ಲಿ ಉಗ್ರ ಚಟುವಟಿಕೆ ನಡೀತಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ: ಯು.ಟಿ.ಖಾದರ್

author img

By

Published : Aug 13, 2021, 3:31 PM IST

Updated : Aug 13, 2021, 3:49 PM IST

ಉಳ್ಳಾಲ ವ್ಯಾಪ್ತಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ನಾನು ಒಪ್ಪಲು ಸಾಧ್ಯವಿಲ್ಲ. ದೇಶದ್ರೋಹ ಮಾಡುವ ಮನಸ್ಸನ್ನು ಯಾರೂ ಬೆಂಬಲಿಸುವುದೂ ಇಲ್ಲ.‌ ಯಾರಾದರೂ ದೇಶಕ್ಕೆ ದ್ರೋಹ ಮಾಡುವವರು ಎಂದು ಗೊತ್ತಾದಲ್ಲಿ ಎನ್ಐಎಯವರು ಮಾತ್ರವಲ್ಲ ಊರವರೇ ಅವರನ್ನು ಬಿಡೋಲ್ಲ. ಎನ್ಐಎ ತನಿಖೆಯ ಸಂದರ್ಭದಲ್ಲಿ ಯಾರೂ ಮಾತನಾಡುವಂತಿಲ್ಲ. ಈ ಬಗ್ಗೆ ಜಿಲ್ಲೆಯ ಸಂಸದರು, ಸಚಿವರು, ಶಾಸಕರು, ಪೊಲೀಸ್ ಆಯುಕ್ತರು ಯಾರೂ ಮಾತನಾಡಿಲ್ಲ.‌ ಈ ಬಗ್ಗೆ ನಾನು ಮಾತನಾಡಬೇಕೆಂದು ಹೇಳುವ ಬಿಜೆಪಿಯ ಮುಖಂಡರಿಗೆ ಇನ್ನೂ ರಾಜಕೀಯ ಮೆಚುರಿಟಿ ಬಂದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.

Former Minister UT Khaddar statement about Terrorist activity in Ullala
ಯು.ಟಿ.ಖಾದರ್

ಮಂಗಳೂರು: ಎನ್ಐಎ ಅರೆಸ್ಟ್ ಮಾಡಿರುವಾತನ ಮನೆಯ ಮೇಲೆ ಲವ್ ಜಿಹಾದ್ ವಿಚಾರದಲ್ಲಿ ಮುತ್ತಿಗೆ ಹಾಕಿರುವ ವಿಎಚ್​ಪಿ ನಡೆ ಪ್ರಚಾರ ಗಿಟ್ಟಿಸುವ ತಂತ್ರವಾಗಿದ್ದು, ಈ ಮೂಲಕ ಅವರು ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಅವರಿಗೆ ನಿಜವಾದ ಬದ್ಧತೆಯಿದ್ದಲ್ಲಿ ಲವ್ ಜಿಹಾದ್ ಅನ್ನು ಬ್ಯಾನ್ ಮಾಡುವ ಕಾನೂನು ತರುವಂತೆ ಬಿಜೆಪಿ ಕಚೇರಿ, ಎಂಪಿ, ಎಂಎಲ್ಎ ಮುಂದೆ ಪ್ರತಿಭಟನೆ ಮಾಡಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಸವಾಲೆಸೆದರು.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿರುವ ಅವರು, ಸಂಘ ಪರಿವಾರದವರು ಯಾರದೋ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುವ ಬದಲು ಲವ್ ಜಿಹಾದ್​ ಬ್ಯಾನ್ ಮಾಡುವ ಕಾನೂನು ತರುವಂತೆ ಬಿಜೆಪಿ ಸರ್ಕಾರಕ್ಕೆ ಒತ್ತಡ ಹಾಕಬಹುದಲ್ವಾ ಎಂದು ಹೇಳಿದರು.

ಮಾಜಿ ಸಚಿವ ಯು.ಟಿ.ಖಾದರ್

ಉಳ್ಳಾಲ ವ್ಯಾಪ್ತಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ನಾನು ಒಪ್ಪಲು ಸಾಧ್ಯವಿಲ್ಲ. ದೇಶದ್ರೋಹ ಮಾಡುವ ಮನಸ್ಸನ್ನು ಯಾರೂ ಬೆಂಬಲಿಸುವುದೂ ಇಲ್ಲ.‌ ಯಾರಾದರೂ ದೇಶಕ್ಕೆ ದ್ರೋಹ ಮಾಡುವವರು ಎಂದು ಗೊತ್ತಾದಲ್ಲಿ ಎನ್ಐಎಯವರು ಮಾತ್ರವಲ್ಲ ಊರವರೇ ಅವರನ್ನು ಬಿಡೋಲ್ಲ ಎಂದರು.

ಎನ್ಐಎ ತನಿಖೆಯ ಸಂದರ್ಭದಲ್ಲಿ ಯಾರೂ ಮಾತನಾಡುವಂತಿಲ್ಲ. ಈ ಬಗ್ಗೆ ಜಿಲ್ಲೆಯ ಸಂಸದರು, ಸಚಿವರು, ಶಾಸಕರು, ಪೊಲೀಸ್ ಆಯುಕ್ತರು ಯಾರೂ ಮಾತನಾಡಿಲ್ಲ.‌ ಈ ಬಗ್ಗೆ ನಾನು ಮಾತನಾಡಬೇಕೆಂದು ಹೇಳುವ ಬಿಜೆಪಿಯ ಮುಖಂಡರಿಗೆ ಇನ್ನೂ ರಾಜಕೀಯ ಮೆಚುರಿಟಿ ಬಂದಿಲ್ಲ ಎಂದರು.‌

ಮಂಗಳೂರಿನಲ್ಲಿ ಎನ್ಐಎ ಆಗುವ ವಿಚಾರ ಸಂತೋಷದ ವಿಚಾರವೇ. ಜೊತೆಗೆ ಕ್ರೈಂ ಸಂಸ್ಥೆ, ನಾರ್ಕೊಟಿಕ್ ಕೂಡಾ ಪೊಲೀಸ್ ಇಲಾಖೆಯಿಂದ ಪ್ರತ್ಯೇಕವಾಗಿ ಸ್ಥಾಪನೆ ಆಗಬೇಕು ಎಂದರು.

ರಾಜ್ಯ ಸಿಎಂ ತಲಪಾಡಿ ಗಡಿಗೆ ಬಂದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದ ನಡೆ ಖಂಡನೀಯ:

ಕೇರಳದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ಸಿಎಂ ಅವರು ತಲಪಾಡಿ ಗಡಿಗೆ ಬಂದಲ್ಲಿ ಪ್ರತಿಭಟನೆ ಮಾಡುತ್ತೇವೆ. ಅವರು ನಮಗೆ ಹೆದರಿ ಬರುತ್ತಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಬಸವರಾಜ ಬೊಮ್ಮಾಯಿ ಅವರು ನಮ್ಮ‌ ಸಿಎಂ. ಅವರಿಗೆ ಅವಮಾನ ಮಾಡುವ ಕಾರ್ಯವನ್ನು ಯಾರೂ ಮಾಡಬಾರದು. ಗಡಿಯಲ್ಲಿ ರಾಜ್ಯದ ಜನತೆಯ ಆರೋಗ್ಯದ ವಿಚಾರದಲ್ಲಿ ತಪಾಸಣೆ ಕ್ಲಿಷ್ಟ ಮಾಡಲಾಗಿದೆ. ಅದರ ಬಗ್ಗೆ ಮಾತೆತ್ತುವ ಅಧಿಕಾರ ಯಾರಿಗೂ ಇಲ್ಲ ಎಂದರು.

ಗಡಿಯ ವಿಚಾರದಲ್ಲಿ ಮಾತನಾಡುವುದಿದ್ದರೆ ಬಂದು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು ಸಿಎಂ ಬಂದರೆ ಪ್ರತಿಭಟನೆ ಮಾಡುತ್ತೇವೆ ಎನ್ನುವುದಾದಲ್ಲಿ ಅಂತಹ ಬಾಲಿಶ ಹೇಳಿಕೆಗಳನ್ನು ಖಂಡಿಸುತ್ತೇವೆ. ಕನ್ನಡಿಗರು ನಾವು ಮನಸ್ಸು ಮಾಡಿದಲ್ಲಿ ರಾಜ್ಯದ ಸಿಎಂ ಅವರನ್ನು ತಲಪಾಡಿ ಗಡಿಯಿಂದ ತಿರುವನಂತಪುರಂವರೆಗೆ ಪಾದಯಾತ್ರೆ ಮಾಡಿಸುತ್ತೇವೆ ಎಂದು ಸವಾಲೆಸೆದರು.

ಹುಕ್ಕಾಬಾರ್ ಎಂಬ ಮಾತು ಬಿಜೆಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ:

ಕೋಮುವಾದದ ಅಫೀಮಿನಲ್ಲಿರುವವರು ಹುಕ್ಕಾಬಾರ್​ನಂತಹ ಸಂಸ್ಕೃತಿಯನ್ನು ಬಿಂಬಿಸುತ್ತಾರೆ. ಅದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಡವರಿಗೆ, ಹಸಿದವರಿಗೆ ಊಟ ಕೊಡುವ ಯೋಜನೆ ಕಾಂಗ್ರೆಸ್ ಸಂಸ್ಕೃತಿ. ಇದು ನಮಗೂ ಬಿಜೆಪಿಯವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.

ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಯಾವ ರೀತಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ ತಿಳಿಸಲಿ. ಅವರು ಯಾವುದೇ ಹೊಸ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ. ಅದಕ್ಕೆ ಅವರಿಗೆ ಯಾರ ಹೆಸರನ್ನು ಇಡಲು ಆಗಿಲ್ಲ ಎಂದರು.

ಓದಿ:ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭ?: ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಮನೆ ಇಲ್ಲದವರಿಗೆ ಮನೆ ಒದಗಿಸುವ ಬಗ್ಗೆ ವಾಜಪೇಯಿ ವಸತಿ ಯೋಜನೆ ಇದೆ‌. ನಾವು ಅಧಿಕಾರದಲ್ಲಿದ್ದಾಗ ಲಕ್ಷಾಂತರ ಮಂದಿಗೆ ಇದೇ ಯೋಜನೆ ಮೂಲಕ ಅನೇಕ ಮನೆಗಳನ್ನು ನಿರ್ಮಾಣ ಮಾಡಿ ನೀಡಿದ್ದೆವು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಷ್ಟು ಮನೆಗಳನ್ನು ‌ಬಡವರಿಗೆ ನಿರ್ಮಾಣ ಮಾಡಿದ್ದೀರಿ ಎಂದು ಅವರು ಲೆಕ್ಕ ನೀಡಲಿ ಎಂದು ಖಾದರ್ ಅಸಮಾಧಾನ ಹೊರಹಾಕಿದರು.

ರಾಜ್ಯ ಸರ್ಕಾರ ಹೊಸತಾಗಿ ಯೋಜನೆ ತಂದಲ್ಲಿ ಯಾವ ಹೆಸರು ಬೇಕಾದರೂ ಇಡಲಿ. ಆದರೆ ಹಿಂದೆ ಇರುವ ಯೋಜನೆಯ ಹೆಸರು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಹಿಂದೆ ನಾನು ಮಂತ್ರಿಯಾಗಿದ್ದಾಗ ವಾಜಪೇಯಿ ಆರೋಗ್ಯ ಸ್ಕೀಮ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಒತ್ತಡವಿತ್ತು. ಆದರೆ, ನಾವು ಅದನ್ನು ಬದಲಾವಣೆ ಮಾಡಲ್ಲ ಎಂದು ಯು.ಟಿ.ಖಾದರ್ ಹೇಳಿದರು.

ಎನ್-95 ಮಾಸ್ಕ್, ಉತ್ತಮ ಗ್ಲೌಸ್, ಸ್ಯಾನಿಟೈಸರ್ ಕೊರತೆ‌ ಇದೆ:

ಆರೋಗ್ಯ ಇಲಾಖೆಯ ಸಿಬ್ಬಂದಿಗೆ, ಆಸ್ಪತ್ರೆಗಳಲ್ಲಿ ಎನ್-95 ಮಾಸ್ಕ್, ಉತ್ತಮ ಗ್ಲೌಸ್, ಸ್ಯಾನಿಟೈಸರ್ ಕೊರತೆಯಿರುವ ಬಗ್ಗೆ ನಾನು ನಿನ್ನೆ ಸಿಎಂ ದ.ಕ ಜಿಪಂನಲ್ಲಿ ನಡೆಸಿರುವ ಕೊರೊನಾ ಪರಿಶೀಲನಾ ಸಭೆಯಲ್ಲಿ ಮಾತ್ರ ಅಲ್ಲ. ಈ ಹಿಂದೆಯೂ ಹೇಳಿದ್ದೆ. ಈ ಬಗ್ಗೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆಯ ಆಯುಕ್ತರಿಗೂ ಹೇಳಿದ್ದೆ‌ ಎಂದರು.

ಆದರೆ, ಈ ಬಗ್ಗೆ ಯಾವುದೇ ಪ್ರಗತಿ ಆಗಿರಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್-95 ಮಾಸ್ಕ್, ಉತ್ತಮ ಗ್ಲೌಸ್, ಸ್ಯಾನಿಟೈಸರ್, ಸರಿಯಾದ ಪಿಪಿಇ ಕಿಟ್ ನೀಡಿದಲ್ಲಿ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಈ ಸಮಸ್ಯೆ ದ.ಕ‌ ಜಿಲ್ಲೆಯದ್ದು ಮಾತ್ರವಲ್ಲದೆ ಇಡೀ ರಾಜ್ಯದ ಸಮಸ್ಯೆಯಾಗಿದೆ. ಲಾಜಿಸ್ಟಿಕ್​ನಲ್ಲಿಯೇ ಇದರ ಕೊರತೆಯಿದೆ ಎಂದು ಖಾದರ್ ಹೇಳಿದರು.

ಶೀಘ್ರದಲ್ಲೇ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋನು ಸೂದ್ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪನೆ:

ನಟ ಸೋನು ಸೂದ್ ಉಳ್ಳಾಲಕ್ಕೆ ಉತ್ತಮ ಕೊಡುಗೆ ನೀಡಿದ್ದು, ಶೀಘ್ರದಲ್ಲೇ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪನೆಯಾಗಲಿದೆ. 60 ಲಕ್ಷ ರೂ. ಘಟಕಕ್ಕೆ 45 ಲಕ್ಷ ರೂ. ನಟ ಸೋನು ಸೂದ್ ನೀಡಲಿದ್ದು, 15 ಲಕ್ಷ ರೂ. ಎಸ್​ಡಿಆರ್​ಎಫ್ ಫಂಡ್ ಮೂಲಕ ಜಿಲ್ಲಾಡಳಿತ ನೀಡಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಯ ಪರವಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಯು.ಟಿ.ಖಾದರ್ ಹೇಳಿದರು.

ಓದಿ:ಶಾಸಕ‌ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ : ಸಿಸಿಬಿ ಭೇಟಿ, ಪರಿಶೀಲನೆ

Last Updated : Aug 13, 2021, 3:49 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.