ETV Bharat / state

ಕ್ಷುಲ್ಲಕ ವಿಚಾರವಾಗಿ ಜಗಳ ಒಬ್ಬನ ಸಾವು; 8 ಜನರ ಬಂಧನ.. - sulya taluk bellare fight case

ಕ್ಷುಲ್ಲಕ ವಿಚಾರವಾಗಿ ಸುಧೀರ್​ ಮತ್ತು ಮಸೂದ್​ ಎಂಬುವವರ ನಡುವೆ ಜಗಳವಾಗಿದ್ದು, ಜಗಳವನ್ನ ರಾಜಿಮಾಡಿ ಇತ್ಯಾರ್ಥಗೊಳಿಸಲು ಕರೆದು 8 ಜನರು ಸೇರಿ ಮುಸೂದ್​ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸುಳ್ಯ ತಾಲೂಕಿನೆ ಬೆಳ್ಳಾರೆ ಗ್ರಾಮದಲ್ಲಿ ನಡೆದಿದ್ದು ಮಸೂದ್​ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

accuses
ಬಂಧಿತ ಆರೋಪಿಗಳು
author img

By

Published : Jul 21, 2022, 6:48 PM IST

Updated : Jul 21, 2022, 7:24 PM IST

ಸುಳ್ಯ: ಇತ್ತೀಚೆಗೆ ಕ್ಷುಲ್ಲಕ ವಿಚಾರವಾಗಿ ಬೆಳ್ಳಾರೆಯಲ್ಲಿ ಯುವಕನೊಬ್ಬನಿಗೆ 8 ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸುಧೀರ್​ ಮತ್ತು ಮೊಹಮ್ಮದ್ ಮಸೂದ್ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿತ್ತು. ಬಳಿಕ ರಾಜಿಯಲ್ಲಿ ಜಗಳವನ್ನು ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ಸುಧೀರ್​ ಮತ್ತು ಆತನ ಸಂಗಡಿಗರು ಮೊಹಮ್ಮದ್ ಮುಸೂದ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಗಂಭೀರವಾಗಿ ಗಾಯಗೊಂಡ ಮಸೂದ್​ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಸೂದ್​(19) ಮೃತಪಟ್ಟಿದ್ಧಾರೆ.

ಘಟನೆಗೆ ಸಂಬಂಧಿಸಿದಂತೆ ಸುಧೀರ್​ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮುನ್ನೆಚರಿಕೆ ಕ್ರಮವಾಗಿ ಬೆಳ್ಳಾರೆಯಲ್ಲಿ ಪೊಲೀಸ್​ ಬಂದೋಬಸ್ತ್​ ಹಾಕಲಾಗಿದ್ದು, ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ದೇವಸ್ಥಾನದಲ್ಲೇ ಅರ್ಚಕನ ತಲೆಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ!

Last Updated : Jul 21, 2022, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.