ಮಂಗಳೂರು: ಅರ್ಜೆಂಟೀನಾ ದೇಶದ ಫುಟ್ಬಾಲ್ ದಂತಕತೆ ಡೀಗೋ ಮರಡೋನಾ ಸ್ಮರಣಾರ್ಥ ಸಾಗುತ್ತಿರುವ 'ಹ್ಯಾಂಡ್ ಆಫ್ ಗಾಡ್' ಚಿನ್ನದ ಮೂರ್ತಿ ಯಾತ್ರೆ ನಿನ್ನೆ ರಾತ್ರಿ ಮಂಗಳೂರಿಗೆ ಆಗಮಿಸಿತು. ಕೇರಳದಿಂದ ಕತಾರ್ಗೆ ಕೊಂಡೊಯ್ಯಲಾಗುತ್ತಿರುವ ಈ ಮೂರ್ತಿ ಕರ್ನಾಟಕಕ್ಕೆ ಬಂದಿದ್ದು, ಮಂಗಳೂರಿನಲ್ಲಿ ಸ್ವಾಗತಿಸಲಾಗಿದೆ.
ಕೇರಳದ ಉದ್ಯಮಿ ಡಾ.ಬೋಬು ಚೆಮನ್ನೂರ್ (ಬೋಚೆ) ಅವರು ಮರಡೋನಾ ಅವರ ಹ್ಯಾಂಡ್ ಆಫ್ ಗಾಡ್ ಎಂಬ ಮೂರ್ತಿಯನ್ನು ಕತಾರ್ಗೆ ಕೊಂಡೊಯ್ಯುತ್ತಿದ್ದಾರೆ. ತಿರುವನಂತಪುರಂನಲ್ಲಿ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಇಂದು ಮಂಗಳೂರಿನಲ್ಲಿ ಯಾತ್ರೆ ಸಾಗಲಿದ್ದು, ಬಳಿಕ ಮಣಿಪಾಲ ಭಟ್ಕಳ ಮೂಲಕ ಗೋವಾಕ್ಕೆ ತೆರಳಲಿದೆ. ಮಾದಕ ದ್ರವ್ಯದ ವಿರುದ್ಧ ನಡೆಸುವ ಹೋರಾಟಕ್ಕಾಗಿ ಇಂಥದ್ದೊಂದು ಯಾತ್ರೆಯನ್ನು ಬೋಚೆ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: 100 ವಿಶ್ವ ದಾಖಲೆಗಳ ಸರದಾರ.. ಭಾರತೀಯನ ಕೈಚಳಕದಲ್ಲಿ ಅರಳಿತು ಜಗತ್ತಿನ ಅತ್ಯಂತ ಚಿಕ್ಕ ಫಿಫಾ ಟ್ರೋಫಿ