ETV Bharat / state

ಗೀ ರೈಸ್, ಚಿಕನ್ ಕಬಾಬ್ ತಿಂದು ಫುಡ್ ಪಾಯಿಸನ್; ಮಂಗಳೂರಲ್ಲಿ 137 ನರ್ಸಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥ - Health Officer Dr Ashok

ಹಾಸ್ಟೆಲ್​ನಲ್ಲಿ ಆಹಾರ ಸೇವಿಸಿದ ಬಳಿಕ ನರ್ಸಿಂಗ್​ ವಿದ್ಯಾರ್ಥಿನಿಯರು ಅಸ್ವಸ್ಥ- ಫುಡ್​ ಪಾಯ್ಸಿನ್​- ವಿವಿಧ 6 ಆಸ್ಪತ್ರೆಗಳಲ್ಲಿ ಒಟ್ಟು 137 ವಿದ್ಯಾರ್ಥಿನಿಯರು ದಾಖಲು

Food poisoning
ಪುಡ್ ಪಾಯಿಸನ್, 137 ವಿದ್ಯಾರ್ಥಿನಿಯರು ಆಸ್ಪತ್ರೆಗೆ
author img

By

Published : Feb 7, 2023, 7:02 AM IST

Updated : Feb 7, 2023, 7:54 AM IST

ಫುಡ್ ಪಾಯಿಸನ್ ಕುರಿತು ಹೇಳಿಕೆ ನೀಡುತ್ತಿರುವುದು.

ಮಂಗಳೂರು(ದಕ್ಷಿಣ ಕನ್ನಡ) : ಹಾಸ್ಟೆಲ್​ನಲ್ಲಿ ನೀಡಿದ ಗೀ ರೈಸ್ ಮತ್ತು ಚಿಕನ್ ಕಬಾಬ್ ತಿಂದ ಬಳಿಕ 137 ವಿದ್ಯಾರ್ಥಿನಿಯರು ಫುಡ್ ಪಾಯಿಸನ್​ನಿಂದ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ನಗರದ ಸಿಟಿ ಆಸ್ಪತ್ರೆಗೆ ಸೇರಿದ ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಇವರು ಭಾನುವಾರ ರಾತ್ರಿ ಗೀ ರೈಸ್ ಮತ್ತು ಚಿಕನ್ ಕಬಾಬ್ ಸೇವಿಸಿದ್ದಾರೆ. ಸೋಮವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಹಲವು ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಉಂಟಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆಯಿಂದ ರಾತ್ರಿವರೆಗೆ 137 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜಿಗೆ ಗೈರಾಗಿದ್ದ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು.. ನಿನ್ನೆ ಸಿಟಿ ನರ್ಸಿಂಗ್ ಕಾಲೇಜಿನ ತರಗತಿಗೆ 100 ಕ್ಕೂ ಅಧಿಕ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ಅವರು ಯಾಕೆ ಬರಲಿಲ್ಲ ಎಂದು ವಿಚಾರಿಸಿದಾಗ ಫುಡ್ ಪಾಯಿಸನ್ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾತ್ರಿ 8 ಗಂಟೆ ಸುಮಾರಿಗೆ ಸುಮಾರು 400 ರಷ್ಟು ವಿದ್ಯಾರ್ಥಿಗಳು, ಪೋಷಕರು ಸಿಟಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಜನರು ಸೇರಿರುವುದನ್ನು ಪೊಲೀಸ್ ಇಲಾಖೆ ಪರಿಶೀಲಿಸಿದಾಗ ಪುಡ್ ಪಾಯಿಸನ್ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿಯರಿಗೆ ಗೀರೈಸ್ ಮತ್ತು ಚಿಕನ್ ಕಬಾಬ್ ತಿಂದು ವಾಂತಿಬೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಅಸ್ವಸ್ಥಗೊಂಡ 137 ವಿದ್ಯಾರ್ಥಿನಿಯರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಎ ಜೆ ಆಸ್ಪತ್ರೆಯಲ್ಲಿ 52, ಕೆ ಎಂ ಸಿ ಜ್ಯೋತಿ ಯಲ್ಲಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8, ಮಂಗಳಾ ಆಸ್ಪತ್ರೆಯಲ್ಲಿ 3 ಮತ್ತು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 42 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫುಡ್ ಪಾಯಿಸನ್ ನಿಂದ ಅಸ್ವಸ್ಥತೆಗೊಳಗಾದ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, 'ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ನಸುಕಿನ ಜಾವ 2 ಗಂಟೆಗೆ ಹಲವರು ಅನಾರೋಗ್ಯಕ್ಕೀಡಾದೆವು. ಹಾಸ್ಟೆಲ್ ನಲ್ಲಿ ಮೆಸ್ ಫುಡ್ ರೈಸ್ ಮತ್ತು ಚಿಕನ್ ನೀಡಲಾಗಿತ್ತು. ನಾವೆಲ್ಲರೂ ಅಸ್ವಸ್ಥತೆಗೊಳಗಾದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ವಿವಿಧ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡರು. ಮಂಗಳೂರು ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್ ಅವರು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ' ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಟಿ ಪೊಲೀಸ್​ ಕಮೀಷನರ್​ ಶಶಿಕುಮಾರ್​, ಸಿಟಿ ನರ್ಸಿಂಗ್ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯರು ಫುಡ್ ಪಾಯಿಸನ್ ನಿಂದ ಅಸ್ವಸ್ಥರಾಗಿದ್ದಾರೆ. ತುಂಬಾ ವಿದ್ಯಾರ್ಥಿನಿಯರು ನಿನ್ನೆ ಕಾಲೇಜಿಗೆ ಬಾರದೆ ಇರುವುದರ ಕುರಿತು ವಿಚಾರಿಸಿದಾಗ ವಿಚಾರ ಅವರ ಗಮನಕ್ಕೆ ಬಂದಿದೆ. ಇನ್ನು ವಿದ್ಯಾರ್ಥಿನಿಯರ ಪೋಷಕರು ಸುಮಾರು 400 ರಷ್ಟು ಮಂದಿ ಆಸ್ಪತ್ರೆ ಮುಂದೆ ಜಮಾಯಿಸಿದಾಗ ನಮ್ಮ ಗಮನಕ್ಕೆ ಬಂದಿದೆ. 6 ಆಸ್ಪತ್ರೆಯಲ್ಲಿ 137 ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಮಾಹಿತಿ ನೀಡಿದರು.

ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ಮತ್ತು ವೈದ್ಯರ ಜೊತೆಗೆ ಸಮಾಲೋಚನೆ ನಡೆಸಿದೆ. ಹಾಸ್ಟೆಲ್​ಗಳಿಗೆ ತೆರಳಿ ವಿದ್ಯಾರ್ಥಿನಿಯರು ಸೇವಿಸಿದ್ದ ಆಹಾರದ ಸ್ಯಾಂಪಲ್​ಗಳನ್ನು ಸಂಗ್ರಹಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯಾಧಿಕಾರಿ ಡಾ. ಅಶೋಕ್ ಅವರು ಹಲವು ವಿದ್ಯಾರ್ಥಿಗಳು ಭಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರಲ್ಲಿ ಸ್ವಲ್ಪ ಮಟ್ಟಿಗೆ ಡಿ ಹೈಡ್ರೇಷನ್ ಇದೆ. ಬಿ ಪಿ ಸ್ಟೇಬಲ್ ಇದೆ. ಹಲವು ವಿದ್ಯಾರ್ಥಿನಿಯರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ. ಎಲ್ಲರೂ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದು, ಯಾರೂ ಭಯಪಡುವ ವಾತಾವರಣ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಮಂಗಳೂರು: 100ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ

Last Updated : Feb 7, 2023, 7:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.