ಮಂಗಳೂರು: ಹೆಸರುಬೇಳೆ ಮತ್ತು ಐಸ್ ಕ್ರೀಂ ಸೇವಿಸಿ ಫುಡ್ ಪಾಯಿಸನ್‌ಗೊಳಗಾದ ನಾಲ್ವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪ್ಪು ಬಪ್ಪಾಲ್‌ನ ನಿವಾಸಿಗಳಾದ ಅರವಿಂದ ರಾವ್ (52), ಪತ್ನಿ ಪ್ರಭಾವತಿ (45) ಮತ್ತು ಮಕ್ಕಳಾದ ಸೌರಭ್ (20) ಪ್ರತೀಕ್ (18) ಅನಾರೋಗ್ಯ ಹೊಂದಿದ್ದಾರೆ.
ಇವರು ನಿನ್ನೆ ರಾತ್ರಿ ಮಲಗುವ ಮೊದಲು ಹೆಸರುಬೇಳೆ ಮತ್ತು ಐಸ್ ಕ್ರೀಂ ತಿಂದಿದ್ದರು. ಆ ಬಳಿಕ ವಾಂತಿ ಶುರುವಾಗಿದೆ. ಇಂದು ಬೆಳಿಗ್ಗೆ ಮನೆ ಬಾಗಿಲನ್ನು ತೆರೆಯದಿರುವುದನ್ನು ಗಮನಿಸಿದ ಸಂಬಂಧಿಕರು ಬಾಗಿಲು ತೆರೆದು ನೋಡಿದಾಗ ಅಸ್ವಸ್ಥಗೊಂಡಿರುವುದು ಗೊತ್ತಾಗಿದೆ. ತಕ್ಷಣ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾದಚಾರಿ ಮೇಲೆ ಹರಿದ ಲಾರಿ: ಸ್ಥಳದಲ್ಲಿಯೇ ವ್ಯಕ್ತಿ ಸಾವು