ETV Bharat / state

ಕಾನೂನು ಸೇವೆಗಳ ಸಮಿತಿಯಿಂದ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ - ಕಾನೂನು ಸೇವೆಗಳ ಸಮಿತಿಯಿಂದ ಆಹಾರದ ಕಿಟ್ ವಿತರಣೆ

ತಾಲೂಕಿನ ನಾರಾವಿ ಬಸದಿ, ಬೆಳ್ತಂಗಡಿ ಜ್ಯೂನಿಯರ್ ಕಾಲೇಜು, ವಕೀಲರ ಭವನ ಹಾಗು ಉಜಿರೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡ ಸುಮಾರು 80 ಮಂದಿ ವಲಸೆ ಕಾರ್ಮಿಕರಿಗೆ 800 ರೂ. ಮೌಲ್ಯದ ಆಹಾರದ ಕಿಟ್ ಸಹಿತ ತಲಾ 200 ರೂ. ನಗದು ನೀಡಲಾಯಿತು.

food kit Distribution   by Legal Services Committee
ಕಾನೂನು ಸೇವೆಗಳ ಸಮಿತಿಯಿಂದ ಆಹಾರದ ಕಿಟ್ ವಿತರಣೆ
author img

By

Published : Apr 7, 2020, 7:26 PM IST

ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಬೆಳ್ತಂಗಡಿ ವಕೀಲರ ಸಂಘ ಇವರ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಅಲ್ಲದೇ ಕೊರೊನಾ ಸೋಂಕಿನ ಕುರಿತು ಕರಪತ್ರ ಹಾಗೂ ಜಾಗೃತಿ ಮಾಹಿತಿ ಕಾರ್ಯಕ್ರಮಕ್ಕೆ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಇಂದು ಚಾಲನೆ ನೀಡಲಾಯಿತು.

ತಾಲೂಕಿನ ನಾರಾವಿ ಬಸದಿ, ಬೆಳ್ತಂಗಡಿ ಜ್ಯೂನಿಯರ್ ಕಾಲೇಜು, ವಕೀಲರ ಭವನ ಹಾಗು ಉಜಿರೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡ ಸುಮಾರು 80 ಮಂದಿ ವಲಸೆ ಕಾರ್ಮಿಕರಿಗೆ 800 ರೂ. ಮೌಲ್ಯದ ಆಹಾರದ ಕಿಟ್ ಸಹಿತ ತಲಾ 200 ರೂ. ನಗದು ನೀಡಲಾಯಿತು.

ಈ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಪ್ರಧಾನ ನ್ಯಾಯಾಧೀಶ ನಾಗೇಶ ಮೂರ್ತಿ, ಪ್ರಪಂಚವೇ ಸಂಕಷ್ಟದಲ್ಲಿದೆ. ಲಾಕ್‌ಡೌನ್ ಸಂದರ್ಭ ಸಾಮಾಜಿಕ ಅಂತರ ಕಾಯ್ದು ಕೊಂಡು ಜಾಗೃತಿ ವಹಿಸಬೇಕು. ಇವತ್ತಿನ ಸ್ಥಿತಿಯಲ್ಲಿ ಕೆಲವು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು ಅವರಿಗೆ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

ಈ ಸಂಧರ್ಭ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಎಮ್. ಆನಂದ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ. ಎಪಿಪಿ ಕಿರಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಲೋಶಿಯಸ್ ಲೋಬೋ ಕಾರ್ಯದರ್ಶಿ ಕೃಷ್ಣ ಶೆಣೈ, ಕೋಶಾಧಿಕಾರಿ ಹರಿಪ್ರಕಾಶ್, ಜತೆ ಕಾರ್ಯದರ್ಶಿ ಮುಮತಾಜ್ ಬೇಗಂ, ವಕೀಲರಾದ ಶಿವಕುಮಾರ್, ಚಿದಾನಂದ, ನ್ಯಾಯಾಲಯದ ಸಿಬ್ಬಂದಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.