ETV Bharat / state

ಪುತ್ತೂರು-ಕಡಬ ತಾಲೂಕಿನಲ್ಲಿ ಐವರಿಗೆ ಕೊರೊನಾ ಸೋಂಕು - Karnata corona virus update

ಏಳು ವರ್ಷದ ಬಾಲಕಿ, 69 ವರ್ಷ ವೃದ್ಧ ಸೇರಿದಂತೆ 5 ಕೊರೊನಾ ಪ್ರಕರಣಗಳು ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಪತ್ತೆಯಾಗಿವೆ.

corona virus update
ಕೊರೊನಾ ವೈರಸ್​
author img

By

Published : Jul 10, 2020, 4:32 PM IST

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಇಂದು 5 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಮೂವರು ಮಂಗಳೂರು ಮತ್ತು ಇಬ್ಬರು ಪುತ್ತೂರು ಕೋವಿಡ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಕಡಬ ಕುಟ್ರುಪ್ಪಾಡಿ ನಿವಾಸಿಗೆ ಎರಡು ದಿನಗಳ ಹಿಂದೆ ಸೋಂಕು ತಗುಲಿತ್ತು. ಇದೀಗ ಆತನ ಪತ್ನಿ (36) ಮತ್ತು ಪುತ್ರಿಗೂ (7) ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಬಂದು ಮಂಗಳೂರಿನಲ್ಲೇ ಕ್ವಾರಂಟೈನ್​​ ಆಗಿರುವ ಪರ್ಲಡ್ಕ ಗೋಳಿಕಟ್ಟೆ ನಿವಾಸಿಗೆ ಕೊರೊನಾ ದೃಢಪಟ್ಟಿದೆ. ಇವರು ಮಂಗಳೂರು ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ವೃದ್ಧರೊಬ್ಬರಿಗೆ (69) ಮತ್ತು ಕಾವು ಅಮ್ಚಿನಡ್ಕ ಕಾಲೊನಿಯ ಯುವಕನಿಗೆ (26) ಕೋವಿಡ್​-19 ದೃಢಪಟ್ಟಿದೆ. ಇವರಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.