ETV Bharat / state

ಮಂಗಳೂರಿನಲ್ಲಿ ಒಡಿಶಾ ಮೂಲದ ಮೀನುಗಾರ ನಾಪತ್ತೆ

author img

By

Published : Jan 26, 2021, 1:36 PM IST

ಜನವರಿ 21 ರಂದು ಮಂಗಳೂರಿನಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಒಡಿಶಾ ಮೂಲದ ಮೀನುಗಾರ ನಾಪತ್ತೆಯಾಗಿದ್ದು, ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

fishmen from odisha missed in manglore
ಮೀನುಗಾರ ನಾಪತ್ತೆ

ಮಂಗಳೂರು: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ ಒಡಿಶಾ ಮೂಲದ ಮೀನುಗಾರ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಡಿಶಾ ಮೂಲದ ನರೇಂದ್ರ ಸಾಯಿ (32) ಎಂಬ ಮೀನುಗಾರ ನಾಪತ್ತೆಯಾಗಿದ್ದಾರೆ. ಜ.21ರಂದು ರಾತ್ರಿ ಮಂಗಳೂರಿನ ಬೆಂಗರೆ ನಿವಾಸಿ ಕೇಶವ ಸಾಲ್ಯಾನ್ ಎಂಬವರಿಗೆ ಸೇರಿದ ಹನುಮಾನ್ ಬೋಟಿನಲ್ಲಿ 9 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಸುಮಾರು 40ನಾಟಿಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಈ ನರೇಂದ್ರ ನಾಪತ್ತೆಯಾಗಿದ್ದಾರೆ. ವಿಷಯ ತಿಳಿದ ಬಳಿಕ ಎಲ್ಲಿ ಹುಡುಕಿದರೂ ಅವರು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬೋಟಿನ ಚಾಲಕ ಎಂ. ಪಾಂಡಿ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ರೈತರ ಟ್ರ್ಯಾಕ್ಟರ್ ಪರೇಡ್: ದೆಹಲಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ.. ಗಾಳಿಯಲ್ಲಿ ಗುಂಡು - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.